ಕೆನಡಾದಲ್ಲಿ ಮಗನ ಮದುವೆ – ಆನ್‍ಲೈನ್‍ನಲ್ಲಿ ಪೋಷಕರ ಆಶೀರ್ವಾದ

ಮುಂಬೈ: ಕೊರೊನಾ ವೈರಸ್ ಜಗತ್ತಿನಾದ್ಯಂತ ಹಬ್ಬಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಸದ್ಯ ಕೊರೊನಾ ಲಾಕ್‍ಡೌನ್ ಇರುವುದರಿಂದ ಎಲ್ಲೆಡೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ನಡುವೆ ವಿದೇಶದಲ್ಲಿ ನಡೆದ ಮಗನ ಮದುವೆಗೆ ಪೋಷಕರೊಬ್ಬರು ಆನ್‍ಲೈನ್ ಮೂಲಕ ಆಶೀರ್ವಾದ ಮಾಡಿದ್ದಾರೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿ ಮೂಲ ಕುಟುಂಬವೊಂದು ಸಾವಿರಾರು ಕಿ.ಲೋ ಮೀಟರ್ ದೂರ ಕೆನಾಡದಲ್ಲಿ ವಾಸಿಸುತ್ತಿರುವ ತಮ್ಮ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ವಿಭಿನ್ನವಾದ ದಾರಿಯನ್ನು ಕಂಡುಕೊಂಡಿದ್ದಾರೆ. ಹೌದು, ಡೊಂಬಿವಿಲಿಯ ದಂಪತಿ ತಮ್ಮ ಪುತ್ರ ಬೂಷಣ್ ಚೌಧರಿ ಹಾಗೂ ವಧು ಮಂದೀಪ್ ಕೌರ್ ಅವರ ವಿವಾಹ ಸಂಭ್ರಮಕ್ಕೆ ಆನ್‍ಲೈನ್ ಮೂಲಕ ಹಾಜರಾಗಿದ್ದಾರೆ.

ಶನಿವಾರ ಮದುವೆ ಸಮಾರಂಭ ನಡೆದಿದ್ದು, ಡೊಂಬಿವಿಲಿಯಿಂದಲೇ ಅರ್ಚಕರು ಮಂತ್ರ ಹೇಳಿದ್ದಾರೆ. ಆಗ ನವ ಜೋಡಿ ಕೆನಡಾದಲ್ಲಿ ವಿವಾಹವಾಗಿದ್ದಾರೆ. ಈ ವೇಳೆ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಇಬ್ಬರು ಫೇಸ್‍ಬುಕ್ ಹಾಗೂ ಯೂಟ್ಯೂಬ್‍ನಲ್ಲಿ ಲೈವ್ ಬಂದಿದ್ದಾರೆ. ನಂತರ ಮದುವೆಯಾಗುತ್ತಿರುವ ವೇಳೆ ಸಂಬಂಧಿಕರು ಮತ್ತು ಸ್ನೇಹಿತರು ನವಜೋಡಿಗೆ ಅಕ್ಷತೆಯನ್ನು ಆನ್‍ಲೈನ್‍ನಲ್ಲಿಯೇ ತೋರಿಸಿದ್ದಾರೆ. ಇದನ್ನೂ ಓದಿ:ಜಮ್ಮು ಸೇನಾ ಸ್ಟೇಷನ್ ಬಳಿ ಕಾಣಿಸಿದ ಡ್ರೋನ್ – ಸೇನೆಯಿಂದ 25 ಸುತ್ತು ಫೈರಿಂಗ್

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ವರನ ತಂದೆ ಹಿರಮಾನ್ ಚೌಧರಿ ಎರಡು ಕುಟುಂಬದವರು ಮದುವೆ ಮಾಡಬೇಕೆಂದು ನಿಶ್ಚಯಿಸಿದ್ದೇವು. ಸದ್ಯ ಕೊರೊನಾ ಇರುವುದರಿಂದ ಈ ರೀತಿ ವಿವಾಹ ಮಾಡುವುದು ಉತ್ತಮ ಎಂದು ಭಾವಿಸಿದ್ದೇವೆ ಹಾಗೂ ಇದರಿಂದ ಹಣ ಕೂಡ ವ್ಯರ್ಥವಾಗುವುದಿಲ್ಲ ಎಂದಿದ್ದಾರೆ.

Comments

Leave a Reply

Your email address will not be published. Required fields are marked *