– 3,228 ಪ್ರಕರಣ ದಾಖಲು, 261 ಸಾವು
ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಹಾವಳಿ ಶುರುವಾಗಿದೆ. ಕೊರೊನಾ ಪ್ರಕರಣ ಕಡಿಮೆ ಆಗುತ್ತಿದ್ರೆ ಇತ್ತ ಬ್ಲ್ಯಾಕ್ ಫಂಗಸ್ ಅಬ್ಬರ ಹೆಚ್ಚಾಗುತ್ತಿದೆ. ರಾಜ್ಯದ 30 ಜಿಲ್ಲೆಗಲ್ಲಿ ಒಟ್ಟು 3,228 ಬ್ಲ್ಯಾಕ್ ಫಂಗಸ್ ಪ್ರಕರಣ ದಾಖಲಾಗಿದೆ. ಇನ್ನೂ ಬ್ಲ್ಯಾಕ್ ಫಂಗಸ್ಗೆ ರಾಜ್ಯಾದ್ಯಂತ 261 ಜನ ಬಲಿಯಾಗಿದ್ದಾರೆ.
ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಬ್ಲ್ಯಾಕ್ ಫಂಗಸ್ ಹಾವಳಿ ಜೋರಿದೆ. ಇಲ್ಲಿಯವರೆಗೂ ಬೆಂಗಳೂರಿನಲ್ಲಿ 1,039 ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿವೆ. ಜೊತೆಗೆ ಬ್ಲ್ಯಾಕ್ ಫಂಗಸ್ಗೆ ಬೆಂಗಳೂರಿನಲ್ಲಿ 81 ಜನ ಸಾವನ್ನಪ್ಪಿದ್ದಾರೆ. ದಿನೇ ದಿನೇ ಬ್ಲ್ಯಾಕ್ ಫಂಗಸ್ ಸಂಖ್ಯೆ ಏರಿಕೆಯಾಗ್ತಿದ್ದು, ಆತಂಕ ಹುಟ್ಟಿಸಿದೆ.

ರಾಜ್ಯದ 30 ಜಿಲ್ಲೆಗಳಲ್ಲಿ ಅತಿ ಹೆಚ್ಚು ಬ್ಲ್ಯಾಕ್ ಫಂಗಸ್ ಇರುವುದು ಬೆಂಗಳೂರು ನಗರದಲ್ಲಿ . ಬೆಂಗಳೂರಿನಲ್ಲಿ ಇದುವರೆಗೂ 1,039 ಪ್ರಕರಣ ವರದಿಯಾಗಿದ್ದು, 825 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 49 ಜನರು ಗುಣªಮುಖರಾಗಿ ಡಿಸ್ಚಾರ್ಜ್ ಸಹ ಆಗಿದ್ದಾರೆ. ಬೆಂಗಳೂರು ಹೊರತುಪಡಿಸಿ ಧಾರವಾಡದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

Leave a Reply