ಸ್ವಗ್ರಾಮ ತಲಪುತ್ತಲೇ ಭೂಮಿ ತಾಯಿಗೆ ರಾಷ್ಟ್ರಪತಿಗಳ ನಮನ

– ಇಲ್ಲಿಂದಲೇ ರಾಷ್ಟ್ರಪತಿ ಭವನದವರೆಗೆ ಪಯಣ ಅಂದ್ರು

ಲಕ್ನೋ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸ್ವಗ್ರಾಮ ಪರೌಂಕೆ ತಲಪುತ್ತಲೇ ಭೂಮಿ ತಾಯಿಗೆ ನಮಸ್ಕರಿಗೆ ಒಂದು ಕ್ಷಣ ಭಾವುಕಾರದರು. ಪರೌಂಕೆ ಗ್ರಾಮ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಬರುತ್ತದೆ.

ಗ್ರಾಮದ ಹೆಲಿಪ್ಯಾಡ್ ನಲ್ಲಿ ಕಾಪ್ಟರ್ ನಿಂದ ಇಳಿಯುತ್ತಲೇ ರಾಷ್ಟ್ರಪತಿಗಳು ಭೂಮಿಯನ್ನ ಮುಟ್ಟಿ ನಮಸ್ಕರಿಸಿದರು. ಈ ವೇಳೆ ಸ್ಥಳದಲ್ಲಿದ್ದ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದ್ ಬೆನ್ ಪಟೇಲ್, ಭದ್ರತಾ ಸಿಬ್ಬಂದಿ ಮತ್ತು ಇನ್ನಿತರ ಅಧಿಕಾರಿಗಳು ಸಹ ಭಾವುಕರಾದ ದೃಶ್ಯ ಕಂಡು ಬಂತು. ಇದೇ ಗ್ರಾಮದಲ್ಲಿ ಅಕ್ಟೋಬರ್ 1,1945ರಂದು ರಾಮನಾಥ್ ಕೋವಿಂದ್ ಜನಿಸಿದ್ದರು.

ನಾನೇ ಎಲ್ಲೇ ಇರಲಿ, ಆದ್ರೆ ನನ್ನೂರಿನ ಮಣ್ಣಿನ ಪರಿಮಳ ಮತ್ತು ಇಲ್ಲಿಯ ಜನರನ್ನು ಸದಾ ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಪರೌಂಕೆ ಕೇವಕ ನನಗೆ ಊರು ಇಲ್ಲ, ಇದು ನನ್ನ ಮಾತೃಭೂಮಿ. ಇಲ್ಲಿಂದಲೇ ಸೇವೆ ಮಾಡುವ ಪ್ರೇರಣೆ ನನಗೆ ಸಿಕ್ಕಿದೆ. ಇಲ್ಲಿ ಸಿಕ್ಕ ಪ್ರೇರಣೆಯಿಂದ ಕೋರ್ಟಿನಿಂದ ಸುಪ್ರೀಂಕೋರ್ಟ್, ಸುಪ್ರೀಂಕೋರ್ಟ್ ನಿಂದ ರಾಜ್ಯ ಸಭೆ, ರಾಜ್ಯಸಭೆಯಿಂದ ರಾಜಭವನ, ರಾಜಭವನದಿಂದ ರಾಷ್ಟ್ರಪತಿ ಭವನ ತಲಪುವಂತೆ ಮಾಡಿದೆ.

ಈ ನನ್ನೂರು ಸಾಮಾನ್ಯ ಬಾಲಕನನ್ನು ದೇಶದ ಅತ್ಯುನ್ನತ ಸ್ಥಾನದಲ್ಲಿ ಕೂರಿಸುತ್ತೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಆದ್ರೆ ನಮ್ಮ ಪ್ರಜಾಪ್ರಭುತ್ವ ಎಲ್ಲವೂ ಸಾಧ್ಯ ಅನ್ನೋದನ್ನ ತೋರಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಸಾಯಿಖಾನೆಗೆ ಕಳ್ಳಸಾಗಣೆಯಾಗುತ್ತಿದ್ದ 18 ಗೋವುಗಳ ರಕ್ಷಣೆ

ರಾಷ್ಟ್ರಪತಿಗಳು ಜೂನ್ 25ರಂದು ವಿಶೇಷ ರೈಲಿನ ಮೂಲಕ ದೆಹಲಿಯಿಂದ ಕಾನ್ಪುರಕ್ಕೆ ಆಗಮಿಸಿದ್ದರು. ಜೂನ್ 28ರಂದು ರೈಲಿನ ಮೂಲಕವೇ ಲಕ್ನೋಗೆ ಪ್ರಯಾಣ ಬೆಳೆಸಲಿದ್ದಾರೆ. ಜೂನ್ 29ರಂದು ಫ್ಲೈಟ್ ಮೂಲಕ ದೆಹಲಿಗೆ ಹಿಂದಿರುಗಲಿದ್ದಾರೆ. ಇದನ್ನೂ ಓದಿ: ಒಂದೇ ತಂಡದ ಪರ ಕ್ರಿಕೆಟ್ ಆಡಲಿದ್ದಾರೆ ಯುವರಾಜ್, ಗೇಲ್, ಎಬಿಡಿ

Comments

Leave a Reply

Your email address will not be published. Required fields are marked *