ಪಾನಮತ್ತ ವ್ಯಕ್ತಿಯ ಕಿತಾಪತಿ – ಮಹಿಳೆಯರ ಮುಂದೆ ಬೆತ್ತಲೆ ಪ್ರದರ್ಶನ

ಚಾಮರಾಜನಗರ: ನರೇಗಾ ಕಾಮಗಾರಿಯಲ್ಲಿ ನಿರತರಾಗಿದ್ದ ಮಹಿಳೆಯರ ಮುಂದೆ ಅಶ್ಲೀಲ ವರ್ತನೆ ಮಾಡಿ, ಬೆತ್ತಲೆಯಾಗಿ ಪಾನಮತ್ತ ವ್ಯಕ್ತಿಯೊಬ್ಬ ಕಿತಾಪತಿ ಮಾಡಿದ ಘಟನೆ ಚಾಮರಾಜನಗರ ತಾಲೂಕು ಪುಣಜನೂರು ಗ್ರಾಮದಲ್ಲಿ ವರದಿಯಾಗಿದೆ.

ಅಶ್ಲೀಲವಾಗಿ ವರ್ತನೆ ಮಾಡಿದ ವ್ಯಕ್ತಿಯನ್ನು ಚಾಮರಾಜನಗರ ತಾಲೂಕು ಪುಣಜನೂರು ಗ್ರಾಮದ ತಾಂಡವಮೂರ್ತಿ ಎಂದು ಗುರುತಿಸಲಾಗಿದೆ. ತಾಂಡವಮೂರ್ತಿ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಜಗಳವಾಡಿದ್ದಾನೆ. ಕುಡಿದ ಮತ್ತಿನಲ್ಲಿದ್ದ ತಾಂಡವಮೂರ್ತಿ ಜಗಳವಾಡಿ ಬಳಿಕ ಬೆತ್ತಲೆಯಾಗಿ ಮಹಿಳೆಯರಿಗೆ ಮುಜುಗರವಾಗುವಂತೆ ನಡೆದುಕೊಂಡಿದ್ದಾನೆ. ಇದನ್ನೂ ಓದಿ: ದಯಾಮರಣ ಕೋರಿ ಧರಣಿ ಕುಳಿತ ರೈತ ಕುಟುಂಬ

ತಾಂಡವಮೂರ್ತಿ ಬೆತ್ತಲೆಯಾಗಿ ಓಡಾಡುತ್ತಿದ್ದನ್ನು ನೋಡಿದ ಸ್ಥಳೀಯರು ವೀಡಿಯೋ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರಿಂದ ಕುಪಿತಗೊಂಡ ತಾಂಡವಮೂರ್ತಿಯ ಮಕ್ಕಳಾದ ಮಹೇಂದ್ರ ಮತ್ತು ಸಂತೋಷ್ ಪೊಲೀಸರಿಗೆ ಒಪ್ಪಿಸಿದ ಗ್ರಾಮದ ಮೂವರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ಬಳಿಕ ಗ್ರಾಮಸ್ಥರು ಹಲ್ಲೆಗೊಳದ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಶ್ಲೀಲವಾಗಿ ವರ್ತಿಸಿದ ತಾಂಡವಮೂರ್ತಿ ಮತ್ತು ಆತನ ಮಕ್ಕಳಾದ ಮಹೇಂದ್ರ, ಸಂತೋಷ್‍ನ್ನು ಪೊಲೀಸರು ಬಂಧಿಸಿದ್ದು, ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *