ಸ್ಪರ್ಧಿಗಳ ಗೇಮ್ ಪ್ಲ್ಯಾನ್ ಕೇಳಿ ಅಚ್ಚರಿಗೊಳಗಾದ್ರು ಸುದೀಪ್..!

ಬಿಗ್‍ಬಾಸ್ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಆದರೆ ಬಿಗ್‍ಬಾಸ್ ಸ್ಪರ್ಧಿಗಳು ಮಾತ್ರ ಸಖತ್ ಗೇಮ್ ಪ್ಲ್ಯಾನ್‍ನೊಂದಿಗೆ ಬಂದಿದ್ದಾರೆ. ಯಾವೆಲ್ಲಾ ಪ್ಲ್ಯಾನ್‍ನೊಂದಿಗೆ ಬಂದಿದ್ದಾರೆ ಎನ್ನುವುದನ್ನು ಕೇಳಿದ ಕಿಚ್ಚನಿಗೆ ಸ್ಪರ್ಧಗಳಿಂದಿ ಬಂದಿರುವ ಉತ್ತರಗಳು ಆಶ್ಚರ್ಯವನ್ನುಂಟು ಮಾಡಿದೆ.

ಹೌದು, ಬಿಗ್‍ಬಾಸ್ ಸ್ಪರ್ಧಿಗಳು ಒಂಟಿಮನೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಸುದೀಪ್ ಹೇಗೆ ಈ ಬಾರಿ ಹಿಂದಿನ ಇನ್ನಿಂಗ್ಸ್‍ಗಿಂತ ಹೇಗೆ ವಿಭಿನ್ನವಾಗಿ ಆಟವಾಡುತ್ತೀರಾ? ಏನು ಹೊಸತು ಇರಲಿದೆ. ಹೊರಜಗತ್ತನ್ನು ನೋಡಿ ಬಂದಿದ್ದೀರಾ? ಎಂದು ಪ್ರತಿಯೊಬ್ಬ ಸ್ಪರ್ಧಿಗೆ ಪ್ರಶ್ನಿಸಿದ್ದಾರೆ. ಆದರೆ ಸ್ಪರ್ಧಿಳು ಮಾತ್ರ ಹಿಂದೆ ಇದ್ದಂತೆ ಇಲ್ಲ. ದೊಡ್ಡಮನೆಯ ಆಟಕ್ಕೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಬಂದಂತೆ ಉತ್ತರಗಳನ್ನು ಕೊಟ್ಟಿದ್ದಾರೆ. ಇದನ್ನೂ ಓದಿ:  50 ದಿನ ನಡೆಯಲಿದೆ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್

ನಾನೆ ಆನೆ.. ನಾನೆ ಇರುವೆ ಎಂದು ರಘು ಹೇಳಿದ್ದಾರೆ. ವೈಷ್ಣವಿ ಜೊತೆಗಿನ ಸ್ನೇಹ ಅಷ್ಟಾಗಿ ಚೆನ್ನಾಗಿರಲ್ಲ ಎನ್ನುವ ಕ್ಲ್ಯೂ ರಘು ಉತ್ತರದಿಂದ ಸಿಕ್ಕಂತಿದೆ. ನನ್ನ ಬೈಕ್ ರೈಡ್‍ನಲ್ಲಿ ಸಿಂಗಲ್ ರೈಡ್ ಇರುತ್ತದೆ ಎಂದು ಹೇಳುವ ಮೂಲಕವಾಗಿ ಮಂಜು, ದಿವ್ಯಾ ಸುರೇಶ್ ಅವರ ಜೊತೆಗೆ ಮೊದಲ ಸಂಚಿಕೆಯಲ್ಲಿದ್ದಂತೆ ಇರುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಹಿಂದಿನ ಆಟಕ್ಕಿಂತ ಈ ಬಾರಿ ಚಿಂದಿ ಮಾಡೋಣ ಎಂದು ಬಂದಿದ್ದೇನೆ ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ. ವೈಷ್ಣವಿ ಮತ್ತೆ ಆನೆ… ಇರುವೆ ಜೋಕ್‍ನೊಂದಿಗೆ ನಗುಮುಖದಿಂದ ಎಂಟ್ರಿಕೊಟ್ಟಿದ್ದಾರೆ. ಹೀಗೆ ಶಮಂತ್, ಅರವಿಂದ್, ಪ್ರಶಾಂತ್ ಸಂಬರಗಿ, ಚಕ್ರವರ್ತಿ, ದಿವ್ಯಾ ಉರುಡುಗ, ಪ್ರಿಯಾಂಕ, ಶುಭಾ, ನಿಧಿ ಗ್ರ್ಯಾಂಡ್ ಆಗಿ ಮನೆಯನ್ನು ಪ್ರವೇಶಿಸಿದ್ದಾರೆ.

ಮೊದಲ ಸಂಚಿಕೆಗಿಂತ ಸೆಕೆಂಡ್ ಇನ್ನಿಂಗ್ಸ್ ಮೇಲೆ ಹೆಚ್ಚಿನ ನೀರಿಕ್ಷೆಗಳಿವೆ. ಬಿಗ್‍ಬಾಸ್ ಏನೆಲ್ಲಾ ಹೊಸ ಗೇಮ್ ಪ್ಲ್ಯಾನ್ ಮಾಡಿದ್ದಾರೆ. ವೀಕ್ಷಕರ ನೀರಿಕ್ಷೆಗೂ ಮೀರಿದ ಸಂಗತಿಗಳು ನಡೆಯುತ್ತಾ? ರೋಚಕತೆಯಿಂದ ಕೂಡಿರುತ್ತಾ? ಜಗಳ, ಪ್ರೀತಿ, ಸ್ನೇಹ ಬಿಟ್ಟಿ ಹೊಸದೇನು ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸ್ಫರ್ಧಿಗಳ ಸೂತ್ರ ಇನ್ನು ಬಿಗ್‍ಬಾಸ್ ಕೈಯಲ್ಲಿ ಇರಲಿದೆ.

Comments

Leave a Reply

Your email address will not be published. Required fields are marked *