ಲಾಕ್‍ಡೌನ್‍ನಲ್ಲಿ ಹೆಚ್ಚಾಗ್ತಿದೆ ಸರಗಳ್ಳರ ಹಾವಳಿ- ಬೇಟೆಗಿಳಿದ ಖಾಕಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹದ್ದುಬಸ್ತಿನಲ್ಲಿದ್ದ ಸರಗಳ್ಳರ ಹಾವಳಿ ಮತ್ತೆ ಮುನ್ನೆಲೆಗೆ ಬಂದಿದ್ದು, ಗಾರ್ಡನ್ ಸಿಟಿ ಮಹಿಳೆಯರ ನಿದ್ದೆಗೇಡಿಸಿದೆ. ಲಾಕ್‍ಡೌನ್‍ನಿಂದಗಿ ಸರಗಳ್ಳತನ ಮತ್ತೆ ಹೆಚ್ಚಾಗಿದ್ದು, ಪೊಲೀಸರ ತಲೆನೋವಿಗೆ ಕಾರಣವಾಗಿದೆ.

ಲಾಕ್‍ಡೌನ್ ಹಿನ್ನೆಲೆ ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ಜನ ಗುಂಪಾಗಿ ಸೇರುವಹಾಗಿಲ್ಲ. ಹೀಗಾಗಿ ಬೆಂಗಳೂರು ರಸ್ತೆಗಳು ಬಿಕೋ ಏನ್ನುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸರಗಳ್ಳರು, ನಗರದಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದಾರೆ. ಕಳೆದೆರಡು ದಿನಗಳಲ್ಲಿ ವಿಜಯ ನಗರ, ಸುಬ್ರಹ್ಮಣ್ಯಪುರ ಸೇರಿದಂತೆ ಹಲವಡೆ ಮಹಿಳೆಯರು ಹಾಲು, ತರಕಾರಿ ತಗೆದಕೊಂಡು ಹೋಗುವಾಗ ವಿಳಾಸ ಕೇಳುವ ನೆಪದಲ್ಲಿ ಸರಗಳನ್ನು ಎಗರಿಸುತ್ತಿದ್ದಾರೆ.

ಸರಗಳ್ಳತನದ ಬಗ್ಗೆ ಹೆಚ್ಚು ದೂರುಗಳು ದಾಖಲಾಗುತ್ತಿದ್ದು, ಪೊಲೀಸರು ಅರ್ಧ ರಾತ್ರಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಪಶ್ಚಿಮ ವಿಭಾಗದ ಚಂದ್ರಾ ಲೇಔಟ್, ಕೆ.ಪಿ.ಅಗ್ರಹಾರ, ಮಾಗಡಿ ರೋಡ್, ಕಾಟನ್ ಪೇಟೆ, ಉಪ್ಪಾರಪೇಟೆ, ವಿಜಯ ನಗರ, ಕೆಂಗೇರಿ ಪೊಲೀಸ್ ಠಾಣೆ ಸೇರಿದಂತೆ ಒಟ್ಟು 18 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಮಾಡಿದ್ದಾರೆ. ಆಯಾ ಠಾಣೆಯ ಇನ್‍ಸ್ಪೆಕ್ಟರ್, ಸಬ್ ಇನ್‍ಸ್ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿ ನೇತೃತ್ವದಲ್ಲಿ ವಿಶೇಷ ಕಾರ್ಯಚರಣೆ ಮಾಡಿದ್ದಾರೆ. ಸ್ಪೆಷಲ್ ಡ್ರೈವ್ ವೇಳೆಯಲ್ಲಿ ಅನುಮಾನ ಬಂದ ಸುಮಾರು 38ಕ್ಕೂ ಹೆಚ್ಚು ವಾಹಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *