ಕಳ್ಳಬಟ್ಟಿ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ

ಶಿವಮೊಗ್ಗ: ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಳವಳ್ಳಿ ತಾಂಡದ ಮಲ್ಲಪ್ಪನಕಟ್ಟೆ ಬಳಿ ನಡೆದಿದೆ.

ಮಲ್ಲಪ್ಪನಕಟ್ಟೆ ಬಳಿಯ ದಡದಲ್ಲಿ ಗುಂಪೊಂದು ಕಳ್ಳಬಟ್ಟಿ ತಯಾರಿಸುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ. ಅಬಕಾರಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಕಳ್ಳಬಟ್ಟಿ ತಯಾರಿಸುತ್ತಿದ್ದ ತಂಡ ಸ್ಥಳದಿಂದ ಪರಾರಿಯಾಗಿದೆ. ಇದನ್ನು ಓದಿ: ರೈತರಿಂದ ಹಣ್ಣುಗಳನ್ನು ಖರೀದಿಸಿ ಸೋಂಕಿತರಿಗೆ ನೀಡಿದ ಉದ್ಯಮಿ

ಕಳ್ಳಬಟ್ಟಿ ತಯಾರಿಸುತ್ತಿದ್ದವರಲ್ಲಿ ಮಳವಳ್ಳಿ ತಾಂಡಾದ ಬೀರನಾಯ್ಕ ಹಾಗೂ ಆತನ ತಾಯಿ ಲೋಕಿಬಾಯಿ ಎಂಬವರು ಪ್ರಮುಖರಾಗಿದ್ದು ಅವರು ಸಹ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ವೇಳೆ ಕಳ್ಳಬಟ್ಟಿ ತಯಾರಿಸಲು ಇಟ್ಟಿದ್ದ 135 ಲೀಟರ್ ಬೆಲ್ಲದ ಕೊಳೆ ಹಾಗೂ ಪರಿಕರವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ತಯಾರಿಸಿದ್ದ 9 ಲೀಟರ್ ಕಳ್ಳಬಟ್ಟಿಯನ್ನು ಜಪ್ತಿ ಮಾಡಿದ್ದಾರೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಡಿ.ಎನ್.ಹನುಮಂತಪ್ಪ, ಉಪ ನಿರೀಕ್ಷಕ ಪಿ.ಜೆ.ಜಾನ್ ಸೇರಿದಂತೆ ಸಿಬ್ಬಂದಿ ಭಾಗಿಯಾಗಿದ್ದರು. ಇದನ್ನು ಓದಿ: ಸೋಂಕು ನಿಯಂತ್ರಣಕ್ಕೆ ಸರ್ಕಾರದಿಂದ ಬೇಕಾದ ಎಲ್ಲಾ ಸಹಕಾರ ಸಿಗುತ್ತದೆ: ಅಶ್ವತ್ ನಾರಾಯಣ್

Comments

Leave a Reply

Your email address will not be published. Required fields are marked *