ಮಗ ಇವುಗಳನ್ನು ಮಿಸ್ ಮಾಡಿಕೊಳ್ತಿದ್ದಾನೆ ಅಂದ್ರು ಕ್ರೇಜಿ ಕ್ವೀನ್..!

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಲಾಕ್‍ಡೌನ್‍ನಲ್ಲಿ ಮಗ ಹೇಗೆ ಸಮಯ ಕಳೆಯುತ್ತಿದ್ದಾನೆ ಮತ್ತು ಯಾವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾನೆ ಎಂದು ಸುದೀರ್ಘವಾಗಿ ಬರೆದುಕೊಂಡು ಸೋಶಿಯಲ್ ಮೀಡಿಯಾ ಪೋಸ್ಟ್  ಹಾಕಿಕೊಂಡಿದ್ದಾರೆ.

ಲಾಕ್‍ಡೌನ್ ಮಕ್ಕಳಿಗೆ ತುಂಬ ಕಷ್ಟ ಅಂತ ಅನಿಸುತ್ತದೆ. ಶಾಲೆಯನ್ನು, ಶಿಕ್ಷಕರನ್ನು, ಆಟದ ಮೈದಾನದಲ್ಲಿ ನಡೆಯುವ ಹಾಸ್ಯವನ್ನು, ಸ್ನೇಹಿತರ ಜೊತೆ ಕ್ರಿಕೆಟ್ ಆಡುವುದನ್ನು ಎಷ್ಟು ಮಿಸ್ ಮಾಡಿಕೊಳ್ತೀನಿ ಅಂತ ಸೂರ್ಯ ಹೇಳುತ್ತಿರುತ್ತಾನೆ. ಗೂಗಲ್ ಮೀಟ್‍ನಲ್ಲಿ ಸೂರ್ಯ ಸ್ನೇಹಿತರ ಭೇಟಿ ಮಾಡುತ್ತಾನೆ. ಬೇಸಿಗೆ ರಜೆಗಳು, ಸಂಬಂಧಿಕರ ಮನೆಗೆ ಹೋಗುವುದು, ಬೇರೆ ಬೇರೆ ಸ್ಥಳಗಳಿಗೆ ಹೋಗಿ ಹಾಲಿಡೇ ಎಂಜಾಯ್ ಮಾಡುವುದನ್ನು ಈ ವರ್ಷ ಹಾಗೂ ಕಳೆದ ವರ್ಷ ಕೂಡ ಮಕ್ಕಳು ಮಿಸ್ ಮಾಡಿಕೊಂಡಿದ್ದಾರೆ ಎಂದು ರಕ್ಷಿತಾ ಪ್ರೇಮ್ ಸೋಶಿಯಲ್ ಮೀಡಿಯಾ ಪೋಸ್ಟ್  ಹಾಕಿದ್ದಾರೆ.

 

View this post on Instagram

 

A post shared by Rakshitha???? (@rakshitha__official)

ಈಗ ಸೂರ್ಯನ ಶಾಲೆ ಆರಂಭವಾಗಿದೆ. ಎಂದಿನಂತೆ ಅವರ ದಿನಚರಿ ಆರಂಭವಾಗುತ್ತಿತ್ತು. ಆದರೆ ಶಾಲೆ ಇಲ್ಲದೆ ಸ್ನೇಹಿತರು ಸಿಗದೆ ಮಕ್ಕಳಿಗೆ ಇದೆಲ್ಲ ತುಂಬ ಕಿರಿಕಿರಿ ಎನಿಸುತ್ತಿದೆ. ಆದಷ್ಟು ಬೇಗ ಪರಿಸ್ಥಿತಿ ಸಹಜವಾಗಲಿ, ವೈರಸ್ ಕೂಡ ನಿರ್ಮೂಲನೆ ಆಗಲಿ ಎಂದು ಬಯಸುತ್ತೇನೆ. ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ನೋಡಿದಾಗ ಆಶಾಭಾವನೆ ಮೂಡುತ್ತಿದೆ. ಇದನ್ನೂ ಓದಿ: ವಿಶೇಷ ಚೇತನ ಮಕ್ಕಳ ಶಾಲೆಯ ನೆರವಿಗೆ ನಿಂತ ನಟ ಸುದೀಪ್

 

View this post on Instagram

 

A post shared by Rakshitha???? (@rakshitha__official)

ತಾಳ್ಮೆಯಿಂದ ಮನೆಯಲ್ಲಿದ್ದು, ಮನೆಯಲ್ಲಿಯೇ ಶಿಕ್ಷಕರಾಗಿರುವ ಪಾಲಕರಿಗೆ, ಮನೆಗೆಲಸ ಮಾಡುವವರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ. ಆನ್‍ಲೈನ್ ಕ್ಲಾಸ್‍ನಲ್ಲಿ ತಾಳ್ಮೆ ವಹಿಸುವ ಶಿಕ್ಷಕರಿಗೆ ಧನ್ಯವಾದಗಳು. ನಿಜ್ಕೂ ಇದೆಲ್ಲ ಕಷ್ಟಕರವಾದುದು. ಸಮಯ ಬದಲಾಗುವುದು, ಮುಂದಿನ ದಿನಗಳಲ್ಲಿ ಎಲ್ಲ ಸರಿ ಹೋಗುವುದು ಎಂಬ ಆಶಾಭಾವನೆಯಿದೆ ಎಂದು ನಟಿ ರಕ್ಷಿತಾ ಪ್ರೇಮ್ ಸೋಶಿಯಲ್ ಮೀಡಿಯಾ ಪೋಸ್ಟ್  ಹಾಕಿದ್ದಾರೆ.  ಇದನ್ನೂ ಓದಿ: ಮತ್ತು ಬರಿಸುವಂತಿದೆ ಶ್ರೀಲೀಲಾ ಫೋಟೋ ಶೂಟ್

ಸದಾ ಶೂಟಿಂಗ್ ಎಂದು ಬ್ಯುಸಿಯಾಗಿರುವ ನಟಿ ರಕ್ಷಿತಾ ಪ್ರೇಮ್ ತುಂಬಾ ಸಮಯದ ನಂತರ ಬಿಡುವು ಮಾಡಿಕೊಂಡು ತಮ್ಮ ಕುಟುಂಬದ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ತಮ್ಮ ಮಗನ ಲಾಕ್‍ಡೌನ್‍ನಲ್ಲಿ ಸಮಯ ಕಳೆಯುತ್ತಿರುವ ಕ್ಷಣ ಮತ್ತು ಮಗ ಈ ಸಮಯದಲ್ಲಿ ಏನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ ಎಂಬುದನ್ನು ಅರಿತುಕೊಂಡ ರಕ್ಷಿತಾ ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಮಗನ ಜೊತೆಗೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *