ಕಿಮ್ಸ್ ಆಸ್ಪತ್ರೆಯಲ್ಲಿ ಭದ್ರತಾ ವೈಫಲ್ಯ – ಐಸಿಯು ವಾರ್ಡ್‍ನಲ್ಲೇ ಅಟೆಂಡರ್‌ಗಳ ವಾಸ..!

ಹುಬ್ಬಳ್ಳಿ: ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುತ್ತಿರುವ ಕಿಮ್ಸ್ ಆಸ್ಪತ್ರೆ ಇದೀಗ ಮತ್ತೊಂದು ಅವ್ಯವಸ್ಥೆಗೆ ಹೆಸರಾಗಿದೆ.

ಕೊರೊನಾ ಐಸಿಯು ವಾರ್ಡ್ ನಲ್ಲಿ ಯಾರೂ ಹೋಗಬಾರದು ಅನ್ನೋ ನಿಯಮವಿದೆ. ವೈದ್ಯರು, ನರ್ಸ್ ಗಳು ಭಯದಿಂದ ಪಿಪಿಇ ಕಿಟ್ ಹಾಕಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಆದರೆ ಕಿಮ್ಸ್ ನ ಕೊರೊನಾ ಐಸಿಯು ವಾರ್ಡ್ ನಲ್ಲಿ ಅಟೆಂಡರ್ ಗಳು ಸಹ ವಾಸವಾಗಿರುವುದು ಕಿಮ್ಸ್ ಆಸ್ಪತ್ರೆಯ ಭದ್ರತಾ ವೈಫಲ್ಯ ಎತ್ತಿ ತೋರಿಸುವಂತಾಗಿದೆ.

ಕೊರೊನಾ ಐಸಿಯು ವಾರ್ಡ್ ನಲ್ಲಿ ಕೊರೊನಾ ಸೋಂಕಿತನ ಪಕ್ಕದಲ್ಲಿ ಅಟೆಂಡರ್ಸ್ ಹಾಗೂ ಸಂಬಂಧಿಗಳು ಮಲಗಿರುವ ದೃಶ್ಯಗಳು ಇದೀಗ ವೈರಲ್ ಆಗಿದ್ದು ಕಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಯನ್ನ ಎತ್ತಿ ತೋರಿಸುವಂತಿದೆ.

ಕೊರೊನಾ ಸೋಂಕಿತರು ಅನ್ನೋ ಭಯ ಇಲ್ಕದೇ ರೋಗಿಯ ಜೊತೆ ಒಂದೇ ಬೆಡ್‍ನಲ್ಲಿ ಅಟೆಂಡರ್ ಹಾಗೂ ಸಂಬಂಧಿಗಳು ಮಲಗುತ್ತಾರೆ. ಬೆಡ್ ಖಾಲಿ ಇರದಿದ್ರೆ ಸಂಬಂಧಿಗಳು ಐಸಿಯು ವಾರ್ಡ್‍ನ ನೆಲದ ಮೇಲೆ ಹಾಸಿಗೆ ಹಾಸಿಕೊಂಡು ನಿರ್ಭಯವಾಗಿ ಮಲಗುತ್ತಿದ್ದಾರೆ.

ಐಸಿಯು ವಾರ್ಡ್ ನಲ್ಲಿ ಸೋಂಕಿತರಿಗಿಂತ ಅಟೆಂಡರ್ ಗಳೇ ಜಾಸ್ತಿಯಾಗಿದ್ದಾರೆ. ಯಾವುದೇ ಮಾಸ್ಕ್ ಇಲ್ಲದೇ, ಸುರಕ್ಷತೆಯೂ ಇಲ್ಲಿ ಇಲ್ಲದಾಗಿದೆ. ಅಟೆಂಡರ್ ಗಳಿಗೆ ವೈದ್ಯರು ಸಾಕಷ್ಟು ತಿಳಿ ಹೇಳಿ ಹೇಳಿ ಸುಸ್ತಾಗಿ ಹೋಗಿದ್ದು, ಊಟ- ಉಪಹಾರ ನೀಡುವ ನೆಪದಲ್ಲಿ ಅಟೆಂಡರ್ ಗಳು ಹಾಗೂ ಸಂಬಂಧಿಗಳ ಐಸಿಯುನಲ್ಲಿ ವಾಸ್ತವ್ಯ ಹೂಡುತ್ತಿರುವುದು ಸೋಂಕು ಹೆಚ್ಚಾಗಲು ಕಾರಣವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೀಗಾದ್ರೆ ಕೊರೊನಾ ಸೋಂಕು ಯಾವಾಗ ಕಡಿಮೆಯಾಗುವುದು ಎಂಬ ಅನುಮಾನ ಮೂಡಿದೆ. ಐಸಿಯುನಲ್ಲೆ ಈ ಅವಸ್ಥೆ ಆದ್ರೆ ಇನ್ನೂ ಕಿಮ್ಸ್ ನ ಜನರಲ್ ವಾರ್ಡ್ ಸ್ಥಿತಿ ಇನ್ನೂ ಭಯಾನಕವಾಗಿರುವುದು ಕಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಭದ್ರತಾ ಸಿಬ್ಬಂದಿ ವೈಫಲ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *