ಕೋವಿಡ್ 19 ವೈರಸ್ ಮಾನವ ಸೃಷ್ಟಿ ಪೋಸ್ಟ್ ಡಿಲೀಟ್ ಮಾಡಲ್ಲ – ಫೇಸ್‍ಬುಕ್

ವಾಷಿಂಗ್ಟನ್: ಕೋವಿಡ್ 19 ವೈರಸ್ ಮಾನವ ಸೃಷ್ಟಿ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಪೋಸ್ಟ್ ಗಳನ್ನು ಇನ್ನು ಮುಂದೆ ಡಿಲೀಟ್ ಮಾಡುವುದಿಲ್ಲ ಎಂದು ಫೇಸ್‍ಬುಕ್ ಹೇಳಿದೆ.

ವೈರಸ್ ಮೂಲದ ಎದ್ದಿರುವ ಚರ್ಚೆಯ ಬಗ್ಗೆ ಈಗ ಹೊಸ ಆಯಾಮ ಸಿಕ್ಕಿದ ಹಿನ್ನೆಲೆಯಲ್ಲಿ ಮಾನವನ ಸೃಷ್ಟಿ ಎಂದು ಹೇಳುವ ಪೋಸ್ಟ್ ಇನ್ನು ಮುಂದೆ ಡಿಲಿಟ್ ಮಾಡದೇ ಇರಲು ಫೇಸ್‍ಬುಕ್ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಬಗ್ಗೆ ಈ ಮೂಲಕ ಪ್ರತಿಕ್ರಿಯೆ ನೀಡಿರುವ ಫೇಸ್‍ಬುಕ್ ವಕ್ತಾರರು, ವೈರಸ್ ಮೂಲದ ಬಗ್ಗೆ ನಡೆಯುತ್ತಿರುವ ತನಿಖೆ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರೊಂದಿಗೆ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಲಾಜಿ ಕೇಂದ್ರದ ಮೂವರು ಸಂಶೋಧಕರು 2019 ನವೆಂಬರ್ ತಿಂಗಳಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸ್ಫೋಟಕ ವಿಚಾರ ಕಳೆದ ವಾರ ಬೆಳಕಿಗೆ ಬಂದಿತ್ತು. ಇದನ್ನೂ ವೈರಸ್ – ಕೊರೊನಾ ವೈರಸ್ ಚೀನಾದ ಜೈವಿಕ ಅಸ್ತ್ರ?

ಅಮೆರಿಕ ವಾಲ್‍ಸ್ಟ್ರೀಟ್ ಜರ್ನಲ್ ಅಮೆರಿಕದ ಗುಪ್ತಚರ ಮಾಹಿತಿಯನ್ನು ಆಧಾರಿಸಿ ಈ ವರದಿ ಮಾಡಿದ್ದು ಸಂಚಲನ ಮೂಡಿಸಿದೆ, ಅನಾರೋಗ್ಯ ಪೀಡಿತ ಸಂಶೋಧಕರ ಸಂಖ್ಯೆ, ಅವರ ಅನಾರೋಗ್ಯದ ಸಮಯ ಮತ್ತು ಅವರ ಆಸ್ಪತ್ರೆ ಭೇಟಿಗಳ ಬಗ್ಗೆ ಹೊಸ ವಿವರಗಳು ಈ ಗುಪ್ತಚರ ವರದಿಯಲ್ಲಿದೆ ಎಂದು ಹೇಳಿದೆ.

Comments

Leave a Reply

Your email address will not be published. Required fields are marked *