ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

ಚೆನ್ನೈ: ದಕ್ಷಿಣ ಭಾರತದ ಟಾಪ್ ನಟಿಯಾಗಿರುವ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಅತೀ ಹೆಚ್ಚು ಶ್ರೀಮಂತ ನಟಿ ಎಂಬ ಸುದ್ದಿಯೊಂದು ಬಹಿರಂಗಗೊಂಡಿದೆ. ಹಲವಾರು ವರ್ಷಗಳಿಂದ ಸಿನಿಮಾಗಳಲ್ಲಿ ಅಭಿನಯಿಸಿರುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ನಟಿ ನಯನತಾರಗೆ ಅತೀ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಕೂಡ ಇದ್ದಾರೆ.

ಕಾಲಿವುಡ್, ಟಾಲಿವುಡ್, ಮಾಲಿವುಡ್, ಸ್ಯಾಂಡಲ್‍ವುಡ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ನಯನತಾರರವರು ಖಾಸಗಿ ಜೀವನದಲ್ಲಿಯೂ ಸಾಕಷ್ಟು ಏಳು-ಬೀಳುಗಳನ್ನು ನೋಡಿದ್ದಾರೆ. ಅಲ್ಲದೆ ಅನೇಕ ಟೀಕೆ, ವಿವಾದಗಳಿಗೂ ಒಳಗಾಗಿದ್ದರು. ಹೀಗಿದ್ದರೂ ನಯನತಾರ ಮಾತ್ರ ಯಾವುದಕ್ಕೂ ಕುಗ್ಗದೇ ಸೌತ್ ಸಿನಿ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ.

ಸದ್ಯ ನಯನತಾರ ದಕ್ಷಿಣ ಭಾರತದ ಶ್ರೀಮಂತ ನಟಿ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸುತ್ತಾಡಲು ಪ್ರೈವೇಟ್ ವಿಮಾನವನ್ನೇ ಹೊಂದಿರುವ ಇವರ ಬಳಿ ಸುಮಾರು 70 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ನಯನತಾರ ಬಳಿ 80 ಲಕ್ಷದ ಆಡಿ ಕ್ಯೂ 7 ಕಾರು, 75.21 ಲಕ್ಷದ ಬಿಎಂಡಬ್ಲೂ ಎಕ್ಸ್ 5 ಎರಡು ದುಬಾರಿ ವೆಚ್ಚದ ಕಾರುಗಳಿದೆ.

ಒಂದು ಸಿನಿಮಾದಲ್ಲಿ ಅಭಿನಯಿಸಲು ನಯನತಾರರವರು ಸುಮಾರು 3 ಕೋಟಿ ಸಂಭಾವನೆ ಪಡೆಯುತ್ತಾರೆ. 2019ರಲ್ಲಿ 7 ಸಿನಿಮಾಗಳಲ್ಲಿ ನಟಿಸಿರುವ ನಯನತಾರ, 2020ರಲ್ಲಿ 2 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ನೆಟ್ರಿಕಣ್, ಅಣ್ಣಾತ್ತೆ ಹಾಗೂ ವಿಜಯ್ ಸೇತುಪತಿ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಮೂಲತಃ ಕೇರಳದವರಾಗಿರುವ ನಟಿ ನಯನತಾರ ಸದ್ಯ ಚೆನ್ನೈನ ಅಪಾರ್ಟ್‍ಮೆಂಟ್‍ನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಲೀವಿಂಗ್ ಟೂ ಗೆದರ್ ರಿಲೇಷನ್ ಶಿಪ್‍ನಲ್ಲಿದ್ದಾರೆ.

Comments

Leave a Reply

Your email address will not be published. Required fields are marked *