ಫೋಟೋ ಮೇಲೆ ಹಾಲು ಸುರಿಬೇಡಿ, ಹಸಿದವರಿಗೆ ನೀಡಿ- ಸೋನು ಸೂದ್

ಮುಂಬೈ: ಕೊರೊನಾ ಸಂಕಷ್ಟದಲ್ಲಿ ನೆರವಿಗೆ ನಿಂತಿರುವ ಬಾಲಿವುಡ್ ನಟ ಸೋನು ಸೂದ್ ಅಭಿಮಾನಿಗಳಿಗೆ ದೊಡ್ಡ ಕರೆಯೊಂದನ್ನು ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ದಯಮಾಡಿ ಎಲ್ಲರೂ ಹಾಲನ್ನು ಉಳಿಸಿ, ಅಗತ್ಯ ಇರುವವರಿಗೆ ನೀಡಿ. ಯಾರೂ ನನ್ನ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಬೇಡಿ ಎಂದು ಮನವಿ ಮಾಡಿಕೊಂಡು ಟ್ವೀಟ್ ಮಾಡಿ ಸೋನು ಅವರ ಭಾವ ಚಿತ್ರಕ್ಕೆ ಹಾಲಿನ ಅಭೀಷೆಕ ಮಾಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಆಂಧ್ರಪ್ರದೇಶದ ಕುರ್ನೂಲ್ ಮತ್ತು ನೆಲ್ಲೂರಿನಲ್ಲಿ ಸೋನು ಸೂದ್ ಫೋಟೋಗೆ ಹಾಲಿನ ಅಭಿಷೇಕ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೇ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ಸೋನು ಸೂದ್, ಹಾಲನ್ನು ಹಾಳು ಮಾಡಬೇಡಿ ಅಗತ್ಯ ಇರುವವರಿಗೆ ನೀಡಿ ಎಂದು ಮನವಿ ಮಾಡಿದ್ದಾರೆ.

ಸೋನು ಸೂದ್ ಬಳಿ ಕಷ್ಟ ಹೇಳಿಕೊಂಡರೆ ಅದಕ್ಕೆ ಖಂಡಿತ ಪರಿಹಾರ ಸಿಗುತ್ತದೆ ಎಂಬ ಭರವಸೆ ಜನರಲ್ಲಿ ಮೂಡಿದೆ. ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿರುವ ಅವರನ್ನು ಜನರು ದೇವರ ರೀತಿ ನೋಡುತ್ತಾರೆ. ತಮಗೆ ಜನಿಸಿದ ಮಕ್ಕಳಿಗೆ ಸೋನು ಸೂದ್ ಎಂದು ಹೆಸರಿಟ್ಟು, ಸೋನು ಅವರಿಗೆ ದೇವಸ್ಥಾನ, ಹಾಲಿನ ಅಭಿಷೇಕ ಹೀಗೆ ಹಲವು ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದವರೂ ಇದ್ದಾರೆ.

Comments

Leave a Reply

Your email address will not be published. Required fields are marked *