ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾರವರ ಸೋದರ ಸಂಬಂಧಿ ಮತ್ತು ಮ್ಯೂಸಿಕ್ ಕಂಪೋಸರ್ ಸೂರಜ್ ಸರ್ಜಾ ಜ್ಯೂನಿಯರ್ ಚಿರು ಮುದ್ದಾದ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ನಟ ಚಿರಂಜೀವಿ ಸರ್ಜಾ ನಿಧನದ ಬಳಿಕ ಕತ್ತಲೆ ಮೂಡಿದ್ದ ಸರ್ಜಾ ಕುಟುಂಬದಲ್ಲಿ ಜ್ಯೂನಿಯರ್ ಚಿರು ಜನಿಸಿ ಪ್ರೀತಿ ಮತ್ತು ಸಂತಸ ನೀಡುತ್ತಿದ್ದಾನೆ. ಇಷ್ಟು ದಿನ ನಟಿ ಮೇಘನಾ ರಾಜ್ ಪ್ರೀತಿಯ ಪುತ್ರನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದೀಗ ಚಿರು ಸೋದರ ಸಂಬಂಧಿ ಜ್ಯೂನಿಯರ್ ಚಿರು ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ಸೂರಜ್ ಸರ್ಜಾ, ಜೂನಿಯರ್ ಚಿರು ಸರ್ಜಾರನ್ನು ತಮ್ಮ ಮಡಿಲ ಮೇಲೆ ಮಲಗಿಸಿಕೊಂಡು ಎರಡು ಕೈಗಳಿಂದು ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ. ನನ್ನ ಜೀವನದಲ್ಲಿ ನಾನು ಎಂದಿಗೂ ಮಗುವನ್ನು ಹೊತ್ತುಕೊಂಡಿರಲಿಲ್ಲ. ಬಹುಶಃ ಮೊದಲ ಬಾರಿಗೆ ನಾನು ಹೆಚ್ಚಿನ ಸಂಪರ್ಕ ಹೊಂದಿದ್ದು, ಅದು ನನ್ನದೇ ಎಂಬ ಭಾವನೆ ಇತ್ತು ಎಂದು ಕ್ಯಾಪ್ಷನ್ ಹಾಕಿದ್ದರು.
View this post on Instagram
ಈ ಫೋಟೋಗೆ ಮೇಘನಾ ಸರ್ಜಾರವರು ಅವನು ನಿಮ್ಮ ಸ್ವಂತ ಸೂರಜ್.. ಈ ಫೋಟೋವನ್ನು ಬಹಳ ಪ್ರೀತಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಚಿರಂಜೀವಿ ಸರ್ಜಾ ನಿಧನದ ನಂತರ ಅವರ ಚಿಕ್ಕಪ್ಪ ಕಿಶೋರ್ ಸರ್ಜಾರವರ ಪುತ್ರ ಸೂರಜ್ ಸರ್ಜಾರವರ ಧ್ರುವ ಸರ್ಜಾರೊಟ್ಟಿಗೆ ಕೋಲಾಜ್ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಚಿರಂಜೀವಿ ಸರ್ಜಾ ನಮ್ಮನ್ನು ಅಗಲಿದ್ದು, ಇದು ಕೊನೆಯ ಪೋಸ್ಟ್ ಎಂಬುವುದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ಎಂಬುದಕ್ಕೆ ಪದಗಳಲ್ಲಿ ಬಣ್ಣಿಸಲು ಆಗುತ್ತಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು.
View this post on Instagram

Leave a Reply