ಮುಂಬೈ: ಮಹಾರಾಷ್ಟ್ರ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಹೋಮ್ ಐಸೋಲೇಶನ್ ನಿಯಮಗಳಲ್ಲಿ ಬದಲಾವಣೆ ತಂದಿದೆ. ಹೊಸ ಮಾರ್ಗಸೂಚಿ ಪ್ರಕಟಿಸಿರುವ ಸರ್ಕಾರ, ಕೊರೊನಾ ಸೋಂಕಿತರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಬೇಕೆಂದು ಸೂಚಿಸಿದೆ.

ಕೊರೊನಾ ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಕಡಿಮೆ ಇರೋ ಜಿಲ್ಲೆಗಳಲ್ಲಿ ಹೊಸ ಸೋಂಕಿತರು ಮನೆಯಲ್ಲಿ ಐಸೋಲೇಟ್ ಆಗುವಂತಿಲ್ಲ. ಸೋಂಕಿನ ಗುಣಲಕ್ಷಣಗಳು ಇಲ್ಲದಿದ್ರೂ ಕೊರೊನಾ ದೃಢಪಡುತ್ತಿದ್ದಂತೆ ಸಮೀಪದ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಬೇಕು.

ಕೋಲ್ಹಾಪುರ, ಸಾಂಗ್ಲಿ, ಸತರಾ, ಯವತಮಾಳ, ಅಮರಾವತಿ, ರತ್ನಗಿರಿ, ಸಿಂಘುದುರ್ಗ, ಸೋಲಾಪುರ, ಅಕೋಲಾ, ಬುಲಠಾಣಾ, ವಾಶೀಮ್, ಬೀಡ್, ಗಡಚಿರೋಲಿ, ಅಹಮದನಗರ, ಉಸ್ಮಾನಾಬಾದ್ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಹೋಮ್ ಐಸೋಲೇಶನ್ ಬಂದ್ ಮಾಡಲಾಗಿದೆ. ಮುಂಬೈನಲ್ಲಿ ಹೋಮ್ ಐಸೋಲೇಶನ್ ಗೆ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರಬಹುದು. ಹಾಗಂತ ನಿಯಮಗಳಲ್ಲಿ ಸಡಿಲಗೊಳಿಸುವ ಆತುರದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮನೆಯಲ್ಲಿ ಐಸೋಲೇಟ್ ಆಗುವ ಸೋಂಕಿತರು ಸರಿಯಾಗಿ ನಿಯಮಗಳನ್ನ ಪಾಲನೆ ಮಾಡದಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆ ಸೋಂಕು ಪಸರಿಸುವ ಕಡಿಮೆ ಇರೋ ಜಿಲ್ಲೆಗಳಲ್ಲಿ ಹೋಮ್ ಐಸೋಲೇಶನ್ ಬಂದ್ ಮಾಡಲಾಗಿದೆ. ಸೋಂಕಿತರು ತಮ್ಮ ಕುಟುಂಬಸ್ಥರ ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಕೇರ್ ಸೆಂಟರ್ ಗೆ ದಾಖಲಾಗಬೇಕೆಂದು ಸರ್ಕಾರ ಹೇಳಿದೆ.

Leave a Reply