ಸನ್ನಿ ಲಿಯೋನ್‍ಗೆ ಬಟ್ಟೆ ತೊಡಿಸಿ ಸುಸ್ತಾದ ಆರ್ಮಿ ತಂಡ

ಮುಂಬೈ: ಮಾದಕ ನಟಿ ಸನ್ನಿ ಲಿಯೋನ್ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ನಾನಾ ವಿಚಾರಕ್ಕೆ ಸುದ್ದಿಯಾಗುವ ಬೇಬಿ ಡಾಲ್ ಬಟ್ಟೆ ತೊಟ್ಟುಕೊಳ್ಳಲು ಕಷ್ಟ ಪಡುತ್ತಿರುವ ವೀಡಿಯೋ ಸಖತ್ ವೈರಲ್ ಆಗಿದೆ.

ಸನ್ನಿ ಲಿಯೋನ್ ರಿಯಾಲಿಟಿ ಶೋವೊಂದರಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‍ನ ಜನಪ್ರಿಯ Splitsvilla ಶೋಗೆ ನಿರೂಪಕಿಯಾಗಿದ್ದಾರೆ. ಇದೀಗ ಈ ಕಾರ್ಯಕ್ರಮಕ್ಕೆ ತಯಾರಾಗುತ್ತಿರುವ ಹಿನ್ನಲೆಯಲ್ಲಿ ತನಗೆ ಕಾಸ್ಟ್ಯೂಮ್ ತೊಡಿಸಲು ಕಷ್ಟ ಪಟ್ಟ ತಂಡವೊಂದರ ಚಿತ್ರವನ್ನು ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Sunny Leone (@sunnyleone)

ಸೆಲೆಬ್ರಿಟಿಗಳು ಯಾವುದಾದರು ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದಾಗ ಅಥವಾ ಭೇಟಿ ನೀಡಿದಾಗ ಅವರ ಚಂದವನ್ನು ಇಮ್ಮಡಿಗೊಳಿಸಲು ತಂಡವೊಂದಿರುತ್ತದೆ. ಅವರೇ ನಟಿ-ನಟರ ಮೇಕಪ್, ಹೇರ್ ಸ್ಟೈಲ್, ಕಾಸ್ಟ್ಯೂಮ್ ನೀಡಿ ಚಂದಕಾಣುವಂತೆ ಮಾಡುತ್ತಾರೆ. ಅದರಂತೆ ತಂಡವೊಂದು ಸನ್ನಿ ಲಿಯೋನ್ ಅವರು Splitsvilla ಕಾರ್ಯಕ್ರಮಕ್ಕೆ ಗೌನ್ ಧರಿಸಿ ಸಿದ್ಧಗೊಳಿಸುತ್ತಿದ್ದರು. ಆ ಸಮಯದಲ್ಲಿ ಬೆನ್ನಿನ ಭಾಗದಲ್ಲಿದ್ದ ಜಿಪ್ ಮೇಲೇರಿಸಲು ಆಗದೆ ಅವರ ಕಾಸ್ಟ್ಯೂಮ್ ತಂಡವೊಂದು ಹರಸಾಹಸಪಟ್ಟಿದೆ. ಅಂದಹಾಗೆಯೇ ತೆರೆ ಹಿಂದೆ ಸನ್ನಿ ರೆಡಿಯಾಗುತ್ತಿರುವ ದೃಶ್ಯ ಇದಾಗಿದ್ದು, ಈ ತಂಡವನ್ನು ಮಾದಕ ನಟಿ ಆರ್ಮಿ ಎಂದು ಕರೆದಿದ್ದಾರೆ.

 

View this post on Instagram

 

A post shared by Sunny Leone (@sunnyleone)

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಈ ವೀಡಿಯೋಗೆ ಗೌನ್ ಸರಿಯಾಗಿ ಕಾಣಿವಂತೆ ಮಾಡಲು ಆರ್ಮಿಯೇ ಬೇಕಾಗುತ್ತದೆ ಎಂದು ಅಡಿಬರಹ ನೀಡಿದ್ದಾರೆ. ಈ ವೀಡಿಯೋ ವೀಕ್ಷಿಸಿದ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಬರೆದಿದ್ದಾರೆ. ಅದರಲ್ಲಿ ಕೆಲವರು ಕೊನೆಗೆ ಏನಾಯಿತು ಹೇಳಿ ಎಂದು ಸಖತ್ ಮಜಾವಗಿ ಕಮೆಂಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *