ಫ್ರಂಟ್ ಲೈನ್ ವಾರಿಯರ್ಸ್‍ಗೆ ತರಳಬಾಳು ಕೇಂದ್ರದಿಂದ ಆಹಾರ ಪೂರೈಕೆ

ಬೆಂಗಳೂರು: ಕೊರೊನಾ ಎರಡನೇ ಅಲೆಯ ನಿಯಂತ್ರಣದಲ್ಲಿ ಮುಂಚೂಣಿ ಯೋಧರಾಗಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಹಾಗೂ ಮಾಧ್ಯಮದವರಿಗೆ ನಗರದ ತರಳಬಾಳು ಕೇಂದ್ರ ಆಹಾರ ಒದಗಿಸುತ್ತಿದೆ.

ಜನತೆಗೆ ಆಸರೆಯಾಗುವ ಮಾನವೀಯತೆಯ ಮಹಾಸಂಸ್ಥಾನ ಎಂದೇ ಸಿರಿಗೆರೆ ಮಠ ಸುಪ್ರಸಿದ್ಧಿಯಾಗಿದ್ದು, ಇದೀಗ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೊರೂನಾ ನಿರ್ಮೂಲನಾ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ಭಾಗವಾಗಿ ಮುಂಚೂಣಿ ಯೋಧರಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರು ಹಾಗೂ ಪತ್ರಕರ್ತರಿಗೂ ಕೇಂದ್ರದ ವತಿಯಿಂದ ಶನಿವಾರ ಉಚಿತ ಆಹಾರ ವಿತರಣೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ಇತರೆ ಸರ್ಕಾರಿ ಆಸ್ಪತ್ರೆಗಳಿಗೆ ವಿಸ್ತರಿಸಲು ಯೋಚಿಸಲಾಗುತ್ತಿದೆ ಎಂದು ತರಳಬಾಳು ಕೇಂದ್ರದ ಕಾರ್ಯದರ್ಶಿ ಬಾತಿ ವಿಶ್ವನಾಥ ಹೇಳಿದ್ದಾರೆ.

ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆಯ ಅಂಗಸಂಸ್ಥೆಯಾದ ಬೆಂಗಳೂರಿನ ತರಳಬಾಳು ಕೇಂದ್ರದ ಕಾರ್ಯಕಾರಿ ಸಮಿತಿಯಿಂದ ನಗರದ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ ಗಳು, ಪರಿಚಾರಕರು ಹಾಗೂ ಕೋವಿಡ್ ಸೋಂಕಿತರ ಸಂಬಂಧಿಗಳಿಗೆ ಉಚಿತವಾಗಿ ಆಹಾರದ ನೀಡಲಾಗುತ್ತಿದೆ ಎಂದರು.

Comments

Leave a Reply

Your email address will not be published. Required fields are marked *