ಬ್ಲ್ಯಾಕ್ ಫಂಗಸ್ ಹತೋಟಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಡಾ.ಕೆ ಸುಧಾಕರ್

ಹುಬ್ಬಳ್ಳಿ: ಬ್ಲ್ಯಾಕ್ ಫಂಗಸ್ ಇನ್ಫೆಕ್ಷನ್ ಕಡಿಮೆ ಆಗೋ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಫಂಗಸ್ ಬಂದಂತಹ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್ ಅವರು, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಹತೋಟಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಫಂಗಸ್ ಚಿಕಿತ್ಸೆಗೆ ಅವಶ್ಯವಿರೋ 14 ಸಾವಿರ ವೇಲ್ಸ್ ಔಷಧ ದೇಶದಲ್ಲಿ ಉತ್ಪಾದನೆಯಾಗುತ್ತಿದೆ. ಇದರಲ್ಲಿ ರಾಜ್ಯಕ್ಕೂ ಔಷಧ ಕಳುಹಿಸಿಕೊಡೋದಾಗಿ ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ ಎಂದರು.

ಫಂಗಸ್ ಬಾಧೆಗೊಳಗಾದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಬ್ಲ್ಯಾಕ್, ವೈಟ್ ಫಂಗಸ್ ಅಂತಿಲ್ಲ ಫಂಗಸ್ ಇನ್ಫೆಕ್ಷನ್ ಇದೆ. ಫಂಗಸ್ ಎಕ್ಸಪರ್ಟ್ ಗಳನ್ನೊಳಗೊಂಡ ಐವರ ಸಮಿತಿ ರಚಿಸಲಾಗಿದೆ. ಫಂಗಸ್ ಇನ್ಫೆಕ್ಷನ್ ಗೆ ಕಾರಣವಾದ ಅಂಶಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಸಮಿತಿ ಪ್ರಾಥಮಿಕ ವರದಿಯನ್ನೂ ನೀಡಿದ್ದು, ಹ್ಯುಮಿಡಿಫೈಯರ್ ಗಳಿಗೆ ಡಿಸ್ಟಿಲ್ಡ್ ನೀರಿನ ಬದಲಿಗೆ ನಳದ ನೀರು ಬಳಕೆ ಮಾಡಿರೋದು ಬೆಳಕಿಗೆ ಬಂದಿದೆ. ಅದರ ಜೊತೆ ಸ್ಟಿರಾಯ್ಡ್ ಬಳಕೆ ಮತ್ತಿತರ ಕಾರಣಗಳಿಂದ ಫಂಗಸ್ ಬೆಳವಣಿಗೆಯಾಗಿದೆ ಎಂದು ಸಮಿತಿ ಕೆಲವೊಂದು ಸಲಹೆಗಳನ್ನೂ ನೀಡಿದೆ ಎಂದು ಮಾಹಿತಿ ನೀಡಿದರು.

ಫಂಗಸ್ ಇನ್ಫೆಕ್ಷನ್ ನಿಯಂತ್ರಣಕ್ಕೆ ಮತ್ತು ರೋಗಿಗಳನ್ನು ಗುಣಪಡಿಸೋಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವರ್ಷಕ್ಕೆ 10 ಜನ ಫಂಗಸ್ ಇನ್ಫೆಕ್ಷನ್ ರೋಗಿಗಳು ಇರುತ್ತಿದ್ದರು. ಆದರೆ ಈಗ ಜಿಲ್ಲೆಗಳಲ್ಲಿಯೇ ಹತ್ತಕ್ಕೂ ಹೆಚ್ಚು ರೋಗಿಗಳಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 250 ಜನ ಫಂಗಸ್ ಸೋಂಕಿತರಿದ್ದಾರೆ. ಸ್ಟಿರಾಯ್ಡ್ ಅಧಿಕ ಬಳಕೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿ, ಫಂಗಸ್ ಇನ್ಫೆಕ್ಷನ್ ಪ್ರಮಾಣ ಹೆಚ್ಚಿದೆ. ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ನರ್ಸ್, ಪ್ಯಾರಾ ಮೆಡಿಕಲ್ ವರ್ಕರ್ಸ್ ಮತ್ತು ಡಿ ಗ್ರೂಪ್ ನೌಕರರಿಗೆ ರಿಸ್ಕ್ ಅಲೋವೆನ್ಸ್ ಆದಷ್ಟು ಬೇಗ ಕೊಡಲಾಗುವುದು ಎಂದರು.

Comments

Leave a Reply

Your email address will not be published. Required fields are marked *