ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಬಿಸಿಸಿಐ ಪ್ರಕಟಿಸಿದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ಬೆನ್ನಲ್ಲೇ ಕುಲ್ದೀಪ್ ಯಾದವ್, ನಾನು ಮೈದಾನದಲ್ಲಿ ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ವಿರಾಟ್ ಕೊಹ್ಲಿಯನ್ನು ಕೆಣಕ್ಕಿದ್ದಾರೆ.

ಈ ಕುರಿತು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಕುಲ್ದೀಪ್ ಯಾದವ್, ನಾನು ಧೋನಿಯನ್ನು ಮೈದಾನದಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದು, ಅವರು ತುಂಬಾ ಅನುಭವಗಳನ್ನು ಹೊಂದಿದ್ದರು. ತಂಡದ ನಾಯಕನಾಗಿ ತಂಡವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದರು. ಪ್ರತಿ ಬಾರಿ ಬೌಲಿಂಗ್ ಮಾಡಲು ಬಂದಾಗ ವಿಕೆಟ್ ಹಿಂದೆ ನಿಂತು ನನಗೆ ಪ್ರೋತ್ಸಾಹ ಕೊಡುತ್ತಿದ್ದರು. ಆದರೆ ಇದೀಗ ಅಂತಹ ಪ್ರೋತ್ಸಾಹ ಕೊಡುವರಿಲ್ಲ ಎನ್ನುವ ಮೂಲಕ ಕುಲದೀಪ್ ಯಾದವ್ ಕೊಹ್ಲಿಯ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಹಿ ಭಾಯಿ ನಾಯಕನಾಗಿರುವಾಗ ನಾನು ಮತ್ತು ಚಹಲ್ ಯಾವತ್ತು ತಂಡದಲ್ಲಿ ಸ್ಥಾನ ಪಡೆಯುತ್ತಿದ್ದೇವು. ಮಾಹಿ ಭಾಯಿ ಹೇಳಿದಂತೆ ಬೌಲಿಂಗ್ ಮಾಡಿ ಹಲವು ಬಾರಿ ತಂಡಕ್ಕೆ ಜಯ ತಂದುಕೊಟ್ಟಿದ್ದೇವೆ. ಹಲವು ತಂಡಗಳ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ್ದೇವೆ ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ಗೆ 2020ರಲ್ಲಿ ನಿವೃತ್ತಿ ಘೋಷಿಸಿದ ಬಳಿಕ ಕುಲದೀಪ್ ಯಾದವ್ ಕೂಡ ಭಾರತ ತಂಡದಿಂದ ಸ್ಥಾನ ಕಳೆದುಕೊಂಡು ಹೊರ ಬಂದಿದ್ದರು. ಬಳಿಕ ಇದೀಗ ತಂಡಕ್ಕೆ ಕಮ್ಬ್ಯಾಕ್ ಮಾಡಲು ಹರಸಾಹಸ ಪಡುತ್ತಿದ್ದಾರೆ.
ಕುಲದೀಪ್ ಯಾದವ್ ಭಾರತದ ಪರ 63 ಏಕದಿನ ಪಂದಗಳನ್ನು ಆಡಿ 105 ವಿಕೆಟ್ ಪಡೆದಿದ್ದರೆ. ಟಿ20 ಕ್ರಿಕೆಟ್ನಲ್ಲಿ 20 ಪಂದ್ಯಗಳಿಂದ 39 ವಿಕೆಟ್ ಕಬಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ.

Leave a Reply