ಎಲ್ಲದಕ್ಕೂ ಜನರೇ ಹೊಣೆ ಎನ್ನುವುದಾದರೆ ಸರ್ಕಾರ ಏಕೆ ಬೇಕಲ್ಲವೇ : ನಿರ್ದೇಶಕ ಶಶಾಂಕ್

ಬೆಂಗಳೂರು: ಕೊರೊನಾ ಮಹಾಮಾರಿಯಿಂದ ಅದೆಷ್ಟೋ ಜನ ತಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಈ ಕುರಿತಾಗಿ ಮೊಗ್ಗಿನ ಮನಸ್ಸಿ ಖ್ಯಾತಿಯ ನಿರ್ದೇಶಕ ಶಶಾಂಕ್ ಐವರು ಆತ್ಮೀಯರನ್ನು ಕಳೆದುಕೊಂಡಿರುವ ದುಃಖವನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕೊರೊನಾ ದಿಂದಾಗಿ ನಡೆಯುತ್ತಿರುವ ದುರಂತವನ್ನು ನೋಡಿ ಎದೆ ಭಾರವಾಗಿದೆ. ನನ್ನ ಆಪ್ತ ವಲಯದಲ್ಲೇ ಐವರು ಅಸು ನೀಗಿದ್ದಾರೆ. ಮನ ನೊಂದು ಇದುವರೆಗೂ ಹಿಡಿsaದಿಟ್ಟಿದ್ದನೆ. ನನ್ನ ಒಂದು ಸ್ವಂತ ಅನುಭವ ಮತ್ತು ಅದರಿಂದ ಉದ್ಭವಿಸಿದ ಪ್ರಶ್ನೆಯನ್ನು ಇಲ್ಲಿ ಹಂಚಿಕೊಂಡಿದ್ದೇ. ಇದು ಒಬ್ಬ ಸಾಮಾನ್ಯ ಪ್ರಜೆಯ ಅಳಲು ಅಷ್ಟೇ ಎಂದು ಟ್ವೀಟ್ ಮಾಡಿದ್ದಾರೆ.

ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿ ಸಾಮಾನ್ಯ ಜ್ಞಾನದಿಂದ ಮುಂಜಾಗೃತೆ ವಹಿಸುತ್ತೇನೆ. ಒಂದು ವ್ಯವಸ್ಥೆ, ತಜ್ಞರ ತಂಡಗಳನ್ನು ಬೆನ್ನಿಗಿಟ್ಟುಕೊಂಡಿರುವ ಸರ್ಕಾರ ಎಷ್ಟು ಮುಂಜಾಗೃತೆ ವಹಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಎಲ್ಲಕ್ಕಿಂತ ಮಾನವೀತೆ ಮುಖ್ಯ ಎಂದು ಸರ್ಕಾರ ಕಾರ್ಯನಿರ್ವಹಿಸಿದ್ದರೆ ಇಂದು ನೂರಾರು ಜನರ ಪ್ರಾಣ ಉಳಿಯುತ್ತಿತ್ತು. ಎಲ್ಲದಕ್ಕೂ ಜನರೇ ಹೊಣೆ ಎನ್ನುವುದಾದರೆ ಸರ್ಕಾರ ಏಕೆ ಬೇಕಲ್ಲವೇ ಎಂದು ಬರೆದುಕೊಂಡು ಐವರು ಆತ್ಮೀಯರನ್ನು ಕಳೆದುಕೊಂಡಿರುವ ದುಃಖವನ್ನು ಹೊರಹಾಕಿದ್ದಾರೆ.

Comments

Leave a Reply

Your email address will not be published. Required fields are marked *