ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ ಖ್ಯಾತಿಯ ಸಾಹಿತಿ ಶ್ರೀರಂಗ ನಿಧನ

ಬೆಂಗಳೂರು: ಖ್ಯಾತ ಚಲಚಿತ್ರ ಸಾಹಿತಿ ಶ್ರೀರಂಗ ಅವರು ವಯೋಸಹಜ ಕಾಯಿಲೆಯಿಂದ ನಿನ್ನೆ ಕೊನೆಯುಸಿರೆಳೆದಿದ್ದಾರೆ.

ಶ್ರೀರಂಗ (86 ) ಅವರು ಬೆಂಗಳೂರಿನ ನಾಗರಬಾವಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸುಮಾರು 1000ಕ್ಕೂ ಹೆಚ್ಚು ಚಿತ್ರಗೀತೆಗಳನ್ನ ರಚಿಸಿದ ಹೆಚ್ಚುಗಾರಿಕೆ ಶ್ರೀರಂಗ ಅವರದ್ದಾಗಿದೆ.

ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ, ರಂಭೆ ನೀ ವಯ್ಯಾರದ ಗೊಂಬೆ, ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ, ಸುಮ್ ಸುಮ್ನೆ ಓಳು ಬಿಡೋ ಸುಂದರಿ ಸೇರಿ ಸಾಕಷ್ಟು ಹಾಡುಗಳನ್ನು ಶ್ರೀರಂಗ ರಚನೆ ಮಾಡಿದ್ದರು.

ಅದೆಷ್ಟು ಸರಳ‌, ಅದೆಷ್ಟು ಸೌಮ್ಯ, ಅದೆಷ್ಟು ಸಜ್ಜನ, ಅದೆಷ್ಟು ಮಿತಭಾಷಿ ಅಂದ್ರೆ ಅಕ್ಷರಶಃ ವರ್ಣಿಸೋಕೆ ಪದಗಳೇ ಇಲ್ಲ. ಸಂಕೋಚದ ಮುದ್ದೆಯಂತೆ ಒಂದು…

Posted by Kavi Raj on Sunday, 9 May 2021

 

ಕಳೆದ ಕೆಲ ವರ್ಷಗಳಿಂದ ವಯೋ ಸಹಜ ಕಾಯಿಲೆಗೆ ತುತ್ತಾಗಿದ್ದರು. ಹೀಗಾಗಿ, ಅವರಿಗೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ಅವರು ಆರ್ಥಿಕ ಸಂಕಷ್ಟಕ್ಕೂ ತುತ್ತಾಗಿದ್ದರು. ಹೀಗಾಗಿ, ಅವರಿಗೆ ಸಹಾಯ ಮಾಡುವಂತೆ ನಟ ಸಂಚಾರಿ ವಿಜಯ್ ಕರೆ ನೀಡಿದ್ದರು.

Comments

Leave a Reply

Your email address will not be published. Required fields are marked *