ಕೊರೊನಾ ರೋಗಿಗಳ ರಕ್ಷಣೆಗೆ ಆಟೋ ಅಂಬ್ಯುಲೆನ್ಸ್

ನವದೆಹಲಿ: ಕೊರೊನಾ ರೋಗಿಗಳ ರಕ್ಷಣೆಗೆ ಆಟೋರಿಕ್ಷಾ ಅಂಬ್ಯುಲೆನ್ಸ್ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೋಡಿಗಿಳಿದಿವೆ.

ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಟಿವೈಸಿಐಎ ಪೌಂಡೇಷನ್ ಸಹಯೋಗದಲ್ಲಿ 10 ಆಟೋಗಳನ್ನು ಆಟೋ ಅಂಬ್ಯುಲೆನ್ಸ್ ನ್ನಾಗಿ ಪರಿವರ್ತಿಸಿ ಸೇವೆಗೆ ಲಭ್ಯವಾಗುವಂತೆ ಮಾಡಿದ್ದಾರೆ.

ಪ್ರಾರಂಭಿಕ ಹಂತದ ಕೊರೊನಾ ರೋಗಲಕ್ಷಣಗಳನ್ನು ಹೊಂದಿರುವ, ಆಕ್ಸಿಜನ್ ಅಗತ್ಯವಿರುವ ರೋಗಿಗಳಿಗೆ ಆಕ್ಸಿಜನ್ ಸಪೋರ್ಟ್ ಹೊಂದಿರುವ ಆಟೋ ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.

ಆಟೋ  ಅಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಸಿಲೆಂಡರ್ ಹಾಗೂ ಸ್ಯಾನಿಟೈಸರ್‍ಗಳ ಸೌಲಭ್ಯಗಳು ಇರಲಿವೆ ಎಂದು ಪ್ರಕಟಣೆಯಲ್ಲಿತಿಳಿಸಲಾಗಿದೆ. ಮೊದಲ ಹಂತದಲ್ಲಿ 10 ಆಟೋಗಳನ್ನು ಅಂಬ್ಯುಲೆನ್ಸ್ ಗಳಾಗಿ ಪರಿವರ್ತಿಸಲಾಗಿದೆ. ಜನರಿಂದ 25 ಲ್ಷದವರೆಗೆ ಫಂಡ್ ಕಲೆಕ್ಟ್ ಮಾಡಿ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಆಟೋ ಅಂಬ್ಯುಲೆನ್ಸ್ ಸೇವೆ ವಿಸ್ತರಿಸುವುದಾಗಿ ಟಿವೈಸಿಐಎ ಪೌಂಡೇಷನ್ ತಿಳಿಸಿದೆ.

Comments

Leave a Reply

Your email address will not be published. Required fields are marked *