ಕೊರೊನಾ ವಾರಿಯರ್ಸ್‍ಗೆ ಊಟ ವಿತರಿಸಲು ಮುಂದಾದ ಸಂಜೀವ್ ಕಪೂರ್

ಮುಂಬೈ: ಕೋವಿಡ್ ನಮ್ಮೆಲ್ಲರನ್ನು ಆತಂಕಕ್ಕೀಡು ಮಾಡಿದೆ. ಈ ವೇಳೆ ಯಾವುದೇ ಲಾಭವನ್ನು ಬಯಸದೇ ಜನರು ಮತ್ತು ಅನೇಕ ಸಂಸ್ಥೆಗಳು ತಮ್ಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರು ತಮ್ಮ ಕೈನಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಲು ಒಟ್ಟಿಗೆ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇತ್ತೀಚೆಗೆ ಮಾಸ್ಟರ್ ಶೇಫ್ ಸಂಜೀವ್ ಕಪೂರ್ ಕೂಡ ಕೊರೊನಾ ವಾರಿಯರ್ಸ್ ಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಸಂಜೀವ್ ಕಪೂರ್‍ರವರು ಮುಂಬೈನ ಕೂಪರ್ ಆಸ್ಪತ್ರೆ ಮತ್ತು ಸಿಯಾನ್ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿಗೆ ಉಚಿತವಾಗಿ ಊಟ ಒದಗಿಸಲು ವಲ್ರ್ಡ್ ಸೆಂಟ್ರಲ್ ಕಿಚನ್ ಮತ್ತು ತಾಜ್ ಹೋಟೆಲ್ ಜೊತೆ ಕೈ ಜೋಡಿಸಿರುವುದಾಗಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮುಂಬೈನ ಕೂಪರ್ ಆಸ್ಪತ್ರೆ ಮತ್ತು ಸಿಯಾನ್ ಆಸ್ಪತ್ರೆಯಲ್ಲಿರುವ ಆರೋಗ್ಯ ಸಿಬ್ಬಂದಿಗೆ ಊಟ ಒದಗಿಸಲು @ವೀ ಕಿಚನ್ ಮತ್ತು ತಾಜ್ ಹೋಟೆಲ್ ಜೊತೆ ನಾವು ಸೇರಿಕೊಂಡಿದ್ದೇವೆ. ನಾವು ಶೀಘ್ರವೇ ಇದನ್ನು ಅಹಮದಾಬಾದ್‍ಗೂ ವಿಸ್ತರಿಸಲಿದ್ದೇವೆ ಮತ್ತು ದೆಹಲಿಗೂ ಕಳುಹಿಸಲು ಸಿದ್ಧವಿದ್ದೇವೆ. ದಣಿದವರಿಗಾಗಿ ಕೆಲಸ ಮಾಡುತ್ತಿರುವ ಎಲ್ಲಾ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಧನ್ಯವಾದ. ಜೊತೆಗೆ ನಾವೆಲ್ಲರೂ ಸಹ ನಮ್ಮ ಪಾತ್ರ ನಿಭಾಯಿಸೋಣ. ಮನೆಯಲ್ಲಿಯೇ ಇರೋಣ ಮತ್ತು ಮಾಸ್ಕ್‌ನನ್ನು ಸರಿಯಾಗಿ ಧರಿಸೋಣ. ಒಟ್ಟಾಗಿ ಇದನ್ನು ಜಯಿಸೋಣ ಎಂದು ಸಂಜೀವ್ ಕಪೂರ್ ಕ್ಯಾಪ್ಷನ್ ಹಾಕಿಕೊಳ್ಳುವ ಮೂಲಕ ಬಾಣಸಿಗರು ಅಡುಗೆ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

 

View this post on Instagram

 

A post shared by Sanjeev Kapoor (@sanjeevkapoor)

ಈ ಫೋಟೋದಲ್ಲಿ ಬಾಣಸಿಗರು ಅಡುಗೆ ಮಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ.

Comments

Leave a Reply

Your email address will not be published. Required fields are marked *