ಸಿಎಂ ಮನೆಗೆ ಹೋದ್ರೆ ನಮ್ಮನ್ನ ಹೊರ ಹಾಕಿದ್ರು..!

ಬೆಂಗಳೂರು: ಕೊರೊನಾ, ಲಾಕ್ ಡೌನ್ ಇದೆ. ನೀವು ಬರೋದೇ ತಪ್ಪು ಅಂತ ಸಿಎಂ ಮನೆಯಿಂದ ನಮ್ಮನ್ನ ಹೊರ ಹಾಕಿದ್ರು ಎಂದು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯೊಬ್ಬರು ತಮ್ಮ ಸಂಕಟವನ್ನ ವ್ಯಕ್ತಪಡಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಬರುವ, ರಾಜ್ಯ ಮಹಿಳಾ ಸಾಂತ್ವನ ಕೇಂದ್ರಗಳನ್ನ ಸರ್ಕಾರ ಸ್ಥಗಿತಗೊಳಿಸಿದ ಹಿನ್ನೆಲೆ 800ಕ್ಕೂ ಹೆಚ್ಚು ಜನ ಮಹಿಳಾ ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ.

ಕೇಂದ್ರ ಸರ್ಕಾರದ ವನ್ ಸ್ಟಾಫ್ ಸೆಂಟರ್ (ಸಖಿ) ಕುಟುಂಬ ಸಮಾಲೋಚನೆ ಕೇಂದ್ರ ಹಾಗೂ ಸ್ವಧಾರ ಕೇಂದ್ರ ಉಜ್ವಲ ಕೇಂದ್ರ ಇರುವ ಕಡೆ, ಮಹಿಳಾ ಸಾಂತ್ವನ ಕೇಂದ್ರಗಳನ್ನ ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ. ಕಳೆದ 10-20 ವರ್ಷಗಳಿಂದ ಎನ್ ಜಿ ಓಯೇತರ ಮೂಲಕ ಕೆಲಸ ಮಾಡ್ತಿದ್ದ ನೂರಾರು ಪದವಿದರರು ಇದೀಗ ಬೀದಿಗೆ ಬಂದಂತಾಗಿದೆ.

ಈ ಬಗ್ಗೆ ಸಿಎಂ ಅವರನ್ನ ಭೇಟಿ ಮಾಡಲು ಹೋದ ಮೂವರನ್ನು ಕೊರೊನಾ ಇದೆ ಎಂದು ವಾಪಸ್ ಕಳಿಸಿದ್ದಾರೆ. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರನ್ನ ಭೇಟಿ ಮಾಡಿ, ಸರ್ ನಮ್ಮನ್ನ ಅನಾಥರಾಗಿ ಮಾಡಬೇಡಿ. ಕೆಲಸ ಇಲ್ಲದಿದ್ರೆ ಹೊಟ್ಟೆಗೆ ಊಟನೂ ಸಿಗಲ್ಲ, ದಯವಿಟ್ಟು.. ಪುನರ್ ಕರ್ತವ್ಯಕ್ಕೆ ಸೇರಿಸಿಕೊಳ್ಳುವ ಹಾಗೆ ಮಾಡಿ ಎಂದು ಮನವಿ ಪತ್ರ ನೀಡಿದ್ರು.

Comments

Leave a Reply

Your email address will not be published. Required fields are marked *