ದೊಡ್ಮನೆಯಿಂದ ಪಿಕ್‍ನಿಕ್ ಹೋಗ್ಬೇಕಂತೆ ಶುಭಾ ಪೂಂಜಾ!

ದಾ ಹೊರಗಡೆ ಸುತ್ತಾಡಿಕೊಂಡಿದ್ದ ಸೆಲೆಬ್ರೆಟಿಗಳಿಗೆ ದೊಡ್ಮನೆಯಲ್ಲಿ ಒಂದು ರೀತಿ ಕಾಲು ಕಟ್ಟು ಹಾಕಿದಂತೆ ಆಗಿದೆ ಎಂದೇ ಹೇಳಬಹುದು. ಸದ್ಯ ಹೊರ ಪ್ರಪಂಚದಿಂದ ದೂರ ಇರುವ ಶುಭಾ ಪೂಂಜಾ ಪಿಕ್‍ನಿಕ್ ಹೋಗಬೇಕೆಂಬ ಆಸೆಯನ್ನು ಹೇಳಿಕೊಂಡಿದ್ದಾರೆ.

ತಮ್ಮ ಮುಗ್ದ ಮಾತು ಹಾಗೂ ತುಂಟತನದ ಮೂಲಕವೇ ಕನ್ನಡಿಗರ ಮನಗೆಲ್ಲುತ್ತಿರುವ ಶುಭಾ ಪೂಂಜಾ ಬೆಳಗ್ಗೆ ಎದ್ದ ಕೂಡಲೇ ದಿವ್ಯಾ ಉರುಡುಗ ಜೊತೆ ಪಿಕ್‍ನಿಕ್ ಹೋಗಬೇಕು ಎಂದಿದ್ದಾರೆ.

ಇಂದು ಬಿಗ್‍ಬಾಸ್ ನಮ್ಮನ್ನು ಬೇಗ ಎಬ್ಬಿಸಿದ್ದಾರಾ, ಇವತ್ತು ವೆದರ್ ಬಹಳ ಚೆನ್ನಾಗಿ ಉಂಟು ಅಲ್ವಾ ಎಂದು ಶುಭಾ ದಿವ್ಯಾ ಉರುಡುಗಗೆ ಕೇಳುತ್ತಾರೆ. ಆಗ ದಿವ್ಯಾ ಉರುಡುಗ ಹೌದು, ವೆದರ್ ಚೆಂದ ಉಂಟು ಎನ್ನುತ್ತಾರೆ. ಹಾಗಾದರೆ ಇವತ್ತು ನಮ್ಮನ್ನು ಪಿಕ್‍ನಿಕ್‍ಗೆ ಕರೆದುಕೊಂಡು ಹೋಗುತ್ತಾರಾ? ಎಂದು ಶುಭಾ ದಿವ್ಯಾಗೆ ಕೇಳುತ್ತಾರೆ. ಆಗ ದಿವ್ಯಾ ಉರುಡುಗ ಇನ್ನೆನ್ನಾದರೂ ಬೇಕಾ? ಎಂದು ಹೇಳುತ್ತಾ ಹಾಸ್ಯ ಮಾಡುತ್ತಾರೆ. ಆಗ ಶುಭಾ ವೆದರ್ ಚೆಂದ ಉಂಟು ಪಿಕ್‍ನಿಕ್ ಕರೆದುಕೊಂಡು ಹೋದರೆ ಚೆಂದ ಇರುತ್ತದೆ ಅಂತ ನನ್ನ ಅನಿಸಿಕೆ ಎನ್ನುತ್ತಾರೆ.

ಇದಕ್ಕೆ ದಿವ್ಯಾ ಉರುಡುಗ ಎರಡು ಗಂಟೆ ನಿದ್ದೆ ಬೇಡ್ವಾ ಎಂದಾಗ, ಶುಭಾ ನಿದ್ದೆ ಬೇಡ ಸ್ವಲ್ಪ ಪಿಕ್‍ನಿಕ್ ಕರೆದುಕೊಂಡು ಹೋಗಿ ಅಂತ ಹೇಳುತ್ತಾರೆ. ಹಾಗಾದರೆ ತಿನ್ನುವುದಕ್ಕೆ ತಿಂಡಿ ಬೇಡ್ವಾ ಎಂದಾಗ ಶುಭ ಬಿಸ್ಕೆಟ್ಸ್ ಬೇಕು ಅಂತಾರೆ. ನಂತರ ಟ್ರೈನ್ ಹೋಗಿದೆ, ಹಾಗಾಗಿ ಬಸ್ ಕಳುಹಿಸಿ ಬಿಗ್‍ಬಾಸ್ ಎಂದು ಶುಭಾ ಹೇಳುತ್ತಾರೆ.

ಬಳಿಕ ದಿವ್ಯಾ ಉರುಡುಗ ನಿನಗೆ ಎಲ್ಲಿಗೆ ಹೋಗಬೇಕು ಎಂದು ಶುಭಾಗೆ ಕೇಳಿದಾಗ, ಸಕಲೇಶಪುರದ ತನಕ ಹೋದರೂ ಪರವಾಗಿಲ್ಲ. ನಾವೆಲ್ಲ ಪಿಕ್‍ನಿಕ್ ಹೋದರೆ ಚೆಂದ ಇರುತ್ತದೆ ಅಲ್ವಾ ಎಂದು ಶುಭಾ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *