ಗೆಳೆಯ ಚಕ್ರವರ್ತಿಗೆ ಸಂಬರಗಿ ಚಾಲೆಂಜ್

ಮಂಗಳವಾರದ ಬಿಗ್‍ಬಾಸ್ ಎಪಿಸೋಡ್ ಅಕ್ಷರಷಃ ರಣಾಂಗಣವಾಗಿ ಬದಲಾಗಿತ್ತು. ಯಾರು ನಂಬರ್ ಒನ್ ವಿಚಾರದಲ್ಲಿ ಅನಾವಶ್ಯಕ ವಿಚಾರಗಳನ್ನ ಮುನ್ನಲೆಗೆ ತಂದ ಪ್ರಶಾಂತ್ ಸಂಬರಗಿ ವಿರುದ್ಧ ಮತ್ತೊಮ್ಮೆ ಇಡೀ ಮನೆ ಕೆಂಡವಾಗಿತ್ತು. ನಿನ್ನ ವಾದಗಳನ್ನ ಸರಿಯಾದ ಮಾರ್ಗದಲ್ಲಿ ಮಂಡಿಸು ಎಂದು ಸಲಹೆ ಹೇಳಿದ ಗೆಳೆಯ ಚಕ್ರವರ್ತಿಗೆ ಪ್ರಶಾಂತ್ ಸಂಬರಗಿ ಚಾಲೆಂಜ್ ಹಾಕಿದರು.

ಈ ಟಾಸ್ಕ್ ನಲ್ಲಿ ವೋಟಿಂಗ್ ಇರಲಿಲ್ಲ. ಆದ್ರೂ ವೋಟಿಂಗ್ ಮಾಡಿ ನನಗೆ 11ನೇ ಸ್ಥಾನ ನೀಡಿದ್ರು. ಎಲ್ಲ ಆಟ ಮುಗಿದ್ಮೇಲೆ ಮಾತಾಡೋದು ತಪ್ಪು. ಐದರಿಂದ 11ನೇ ಸ್ಥಾನಕ್ಕೆ ಬಂದಾಗಲೇ ಮಾತಾಡಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕಿತ್ತು ಎಂದು ಸಲಹೆ ನೀಡಿದರು.

ಈ ವೇಳೆ ನಿಗಿ ನಿಗಿ ಕೆಂಡವಾಗಿದ್ದ ಪ್ರಶಾಂತ್ ಸಂಬರಗಿಯ ಸಮಾಧಾನಕ್ಕೆ ಶಮಂತ್ ಮುಂದಾದ್ರು. ನಿಮ್ಮ ಪೆಟ್ರೋಲ್, ಫ್ಯೂಯೆಲ್ ಸೇವ್ ಮಾಡಿಕೊಳ್ಳಿ. ಮುಂದಿನ ನಾಲ್ಕೈದು ವಾರ ನಿಮ್ಮ ಆಟ ತೋರಿಸಿ ಅಂತ ಹೇಳಿದ್ರು. ಆದ್ರೆ ಕೋಪದಿಂದ ಕುಣಿಯುತ್ತಿದ್ದ ಸಂಬರಗಿ, ಇದು ದ್ವೇಷದ ಆಟ ಎಂದು ಹೇಳಿ ಇಡೀ ಮನೆ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಇನ್ನೂ ಅಲ್ಲಿಯೇ ನಿಂತಿದ್ದ ಚಕ್ರವರ್ತಿ, ಆಟದ ವೇಳೆ ಪ್ರಶಾಂತ್ ಸಂಬರಗಿಯ ಕೆಲ ಹೇಳಿಕೆಗಳನ್ನ ಖಂಡಿಸಿದ್ರು. ದಿವ್ಯಾ ಸುರೇಶ್ ಜೊತೆ ಚೆನ್ನಾಗಿಯೇ ಮಾತಾಡ್ತಿಯಾ. ಮಂಜು ವಿಷಯದಲ್ಲಿ ಆಕೆ ಹೆಸರನ್ನ ಬಳಸಿಕೊಳ್ಳೋದು ತಪ್ಪು. ಮಂಜು ಕಾಮಿಡಿ ಇಷ್ಟ ಆಗಲ್ಲ ಅಂದ್ರೆ ನೇರವಾಗಿ ಹೇಳು. ಪದೇ ಪದೇ ದಿವ್ಯಾ ಹೆಸರನ್ನ ತೆಗೆದುಕೊಳ್ಳಬೇಡ. ಎಲ್ಲ ವಿಷಯಗಳನ್ನ ತಾಳ್ಮೆಯಿಂದ ಯೋಚಿಸಿ ಬಗೆಹರಿಸಿಕೊಳ್ಳಬೇಕೇ ಹೊರತು ಹೀಗೆ ಕೂಗಾಡಿಲ್ಲ ಎಂದು ಸಂಬರಗಿಗೆ ಚಕ್ರವರ್ತಿ ತಿಳಿ ಹೇಳಿದರು.

ನಾನು ಇನ್ಮುಂದೆ ಹೆಣ್ಣಿನ ಹೆಸರು ಬಳಸಬಾರದು ಅಂತ ಡಿಸೈಡ್ ಮಾಡಿದ್ದೀನಿ. ನಿನಗಿಂತ ಹೆಚ್ಚು ಮಹಿಳೆಯರನ್ನ ಗೌರವಿಸುತ್ತೇನೆ ಮತ್ತು ಪೂಜಿಸುತ್ತೇನೆ. ಯಾರ ವೈಯಕ್ತಿಕ ವಿಚಾರಗಳನ್ನು ಮಾತಾಡಿಲ್ಲ. ಯಾರ ಪರ್ಸನಲ್ ವಿಚಾರ ಮಾತಾಡಿದ್ದೀನಿ ಅಂತ ತೋರಿಸು ಎಂದು ಚಕ್ರವರ್ತಿಗೆ ಸಂಬರಗಿ ಸವಾಲು ಹಾಕಿದರು.

Comments

Leave a Reply

Your email address will not be published. Required fields are marked *