ಕೊರೊನಾ ನಿಯಮ ಪಾಲಿಸಿ ಮದುವೆಯಾದ್ರೆ ಪೊಲೀಸ್ ಅಧಿಕಾರಿಯಿಂದ ಭರ್ಜರಿ ಗಿಫ್ಟ್

ಭೋಪಾಲ್: ಕೋವಿಡ್ ನಿಯಮವನ್ನು ಪಾಲಿಸಿ ಮದುವೆಯಾದ ಜೋಡಿಗೆ ವಿಶೇಷ ಗಿಫ್ಟ್ ನೀಡುವುದಾಗಿ ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋವಿಡ್ ನಿಯಮವನ್ನು ಪಾಲಿಸಿ 10 ಜನರು ಅಥವಾ ಅದಕ್ಕಿಂತ ಕಡಿಮೆ ಜನರ ಸಮ್ಮಖದಲ್ಲಿ ಮದುವೆಯಾದರೆ ಅಂತಹ ವಧು ಮತ್ತು ವರರನ್ನು ತಮ್ಮ ಮನೆಗೆ ಕರೆಸಿ ವಿಶೇಷ ಭೋಜನ ಮತ್ತು ನೆನಪಿನ ಕಾಣಿಕೆ ನೀಡುವುದಾಗಿ ಮಧ್ಯಪ್ರದೇಶದ ಭೀಂದ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಈ ರೀತಿ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಕಳೆದ ವಾರ ಬಿಂಧ್ ಜಿಲ್ಲೆಯ ಕುರ್ತಾರ ಗ್ರಾಮದಲ್ಲಿ ನಡೆದ ಒಂದು ಮದುವೆಯಲ್ಲಿ ಜನರು ಮಾಸ್ಕ್ ಧರಿಸದೇ, ವ್ತಕ್ತಿಗತ ಅಂತರವನ್ನು ಕಾಪಾಡದೇ ಮನಬಂದಂತೆ ನೃತ್ಯ ಮಾಡಿದ್ದರು. ಇದನ್ನು ಗಮನಿಸಿದ ಮನೋಜ್ ಕುಮಾರ್ ಅವರು ಈ ರೀತಿಯಾಗಿ ಮತ್ತೆ ಜರುಗದಂತೆ ಎಚ್ಚರವಹಿಲು ಈ ರೀತಿಯಾಗಿ ಯೋಚನೆ ಮಾಡಿದ್ದಾರೆ.

Jayanth & Victoria, Wedding Ceremony 4/22/12

ನಾನು ಹೇಳಿದ ಹಾಗೆ ಅವರು ಮದುವೆಗೆ ಬರುವ ಅತಿಥಿಗಳ ಸಂಖ್ಯೆಯನ್ನು 10ಕ್ಕೆ ಮಿತಿಗೊಳಿಸಿ ಕೊರೊನಾ ನಿಯಮವನ್ನು ಪಾಲಿಸಿ ಮದುವೆಯಾದರೆ ನಾನು ನನ್ನ ಮನೆಯಲ್ಲಿ ಅವರಿಗೆ ಔತಣ ಕೂಟ ಏರ್ಪಡಿಸುತ್ತೇನೆ ಎಂದು ಮನೋಜ್ ಕುಮಾರ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *