ಆಕ್ಸಿಜನ್ ಸಿಲಿಂಡರ್‌ಗಳ ಅಕ್ರಮ ಸಂಗ್ರಹ- ಓರ್ವ ಅರೆಸ್ಟ್

ನವದೆಹಲಿ: ಮನೆಯೊಂದ್ರಲ್ಲಿ 48 ಆಕ್ಸಿಜನ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯ ಮನೆ ಮೇಲೆ ದೆಹಲಿ ಪೊಲೀಸರು ದಾಳಿ ಮಾಡಿ ಅರೆಸ್ಟ್ ಮಾಡಿದ್ದಾರೆ.

ಅನಿಲ್ ಕುಮಾರ್(51) ಬಂಧಿತ ಆರೋಪಿ. ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದು, ಆಕ್ಸಿಜನ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದು ಮನೆ ಮಾಲೀಕನನ್ನು ಬಂಧಿಸಿದ್ದಾರೆ.

32 ದೊಡ್ಡ ಆಕ್ಸಿಜನ್ ಸಿಲಿಂಡರ್, 16 ಚಿಕ್ಕ ಸಿಲಿಂಡರ್‌ಗಳನ್ನು ಶೇಖರಿಸಿಡಲಾಗಿತ್ತು. ಒಟ್ಟು 48 ಆಕ್ಸಿಜನ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದನು. ಅನಿಲ್ ಕುಮಾರ್ ತಾನು ಕೈಗಾರಿಕೆ ಆಕ್ಸಿಜನ್ ಉದ್ಯಮ ನಡೆಸುತ್ತಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ಲೈಸೆನ್ಸ್ ತೋರಿಸು ಎಂದು ಕೇಳಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ದೊಡ್ಡಸಿಲಿಂಡರ್‌ಗಳಿಂದ ಸಣ್ಣ ಸಿಲಿಂಡರ್‌ಗೆ ಆಕ್ಸಿಜನ್ ವರ್ಗಾಯಿಸುತ್ತಿದ್ದನು. ನಂತರ ಸಣ್ಣ ಸಿಲಿಂಡರ್‌ಗಳನ್ನು 12,500 ರೂಪಾಯಿಗೆ ಮಾರಾಟ ಮಾಡುತ್ತಿದ್ದನು. ಇದೀಗ ವಶಪಡಿಸಿಕೊಂಡು ಆಕ್ಸಿಜನ್ ಸಿಲಿಂಡರ್‌ಗಳನ್ನು ಅವಶ್ಯಕತೆ ಇರುವವರಿಗೆ ನೀಡುವುದಾಗಿ ಪೊಲೀಸರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *