ಬೆಂಗಳೂರು: ಇಂದು ಡಾ.ರಾಜ್ಕುಮಾರ್ ಅವರ 92ನೇ ವರ್ಷದ ಹುಟ್ಟುಹಬ್ಬ. ಕನ್ನಡ ಚಿತ್ರರಂಗದ ಬಂಗಾರದ ಮನುಷ್ಯನಾಗಿ ಅದೆಷ್ಟೋ ಉತ್ತಮ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದ ಅಣ್ಣಾವರ ಹುಟ್ಟುಹಬ್ಬದ ಶುಭಾಶಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡದಲ್ಲೇ ವಿಶೇಷವಾಗಿ ಟ್ವೀಟ್ ಮಾಡಿದೆ.

ಬೆಂಗಳೂರು ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ’ ನಟಸಾರ್ವಭೌಮ ಡಾ. ರಾಜ್ಕುಮಾರ್ ಅವರ 92ನೇ ಜನ್ಮಮಹೋತ್ಸವದ ನೆನಪಿನಲ್ಲಿ ಎಂದು ಕನ್ನಡದಲ್ಲೇ ಬರೆದುಕೊಂಡು ಶುಭಕೋರಿದೆ.
"ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ." ನಟಸಾರ್ವಭೌಮ ಡಾ|| ರಾಜ್ ಕುಮಾರ್ ಅವರ 92ನೆ ಜನ್ಮಮಹೋತ್ಸವದ ನೆನಪಿನಲ್ಲಿ. ❤️🙏#RajNenapu #ನಮ್ಮRCB #PlayBold
— Royal Challengers Bengaluru (@RCBTweets) April 24, 2021
ಈ ರೀತಿ ಆರ್ಸಿಬಿ ತಂಡ ನಟಸಾರ್ವಭೌಮ ಅವರಿಗೆ ವಿಶ್ ಮಾಡುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳು ಹಲವು ಕಮೆಂಟ್ ಹಾಗೂ ಲೈಕ್ಗಳನ್ನು ಕೊಟ್ಟು ಆರ್ಸಿಬಿಯ ಕನ್ನಡ ಪ್ರೇಮವನ್ನು ಕಂಡು ಸಂತೋಷಗೊಂಡಿದ್ದಾರೆ.

ಆರ್ಸಿಬಿ ತಂಡ 14ನೇ ಆವೃತ್ತಿಯ ಐಪಿಎಲ್ನಲ್ಲಿ 4 ಪಂದ್ಯಗಳಲ್ಲಿ ನಾಲ್ಕು ಜಯದೊಂದಿಗೆ ಅಂಕ ಪಟ್ಟಿಯಲ್ಲಿ 8 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಆರ್ಸಿಬಿ ನಾಳೆ ಮುಂಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

Leave a Reply