ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬ-ಶುಭಾಶಯಗಳ ಮಹಾಪೂರ

ಮುಂಬೈ: ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್‍ಮ್ಯಾನ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇಂದು 48ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಕ್ರಿಕೆಟಿಗರು ಸೇರಿದಂತೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯವನ್ನು ಕೋರಿದ್ದಾರೆ.

1973ರಲ್ಲಿ ಮುಂಬೈನ ದಾದರ್‍ ನಲ್ಲಿ ಜನಿಸಿದ ಸಚಿನ್, ಒಬ್ಬ ಕ್ರಿಕೆಟ್ ಆಟಗಾರನಾಗಿ ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ಭಾರತ ಪರ ಅತೀ ಕಿರಿಯ ವಯಸ್ಸಿನಲ್ಲಿ ಬ್ಯಾಟ್‍ಹಿಡಿದು ಮೈದಾನಕ್ಕೆ ಇಳಿದ ಸಚಿನ್ ನೋಡ ನೋಡುತ್ತಲೇ ತನ್ನ ಅದ್ಭುತ ಬ್ಯಾಟಿಂಗ್‍ನಿಂದ ರನ್‍ಶಿಖರವನ್ನು ಕಟ್ಟ ತೊಡಗಿದರು. ನಂತರ ಹಲವು ದಾಖಲೆಗಳ ಒಡೆಯನಾಗಿ ಕ್ರಿಕೆಟ್ ದೇವರಾಗಿ ಎಲ್ಲರ ಮನದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದ ಪರ 664 ಪಂದ್ಯಗಳನ್ನು ಆಡಿರುವ ಸಚಿನ್ 34,357 ರನ್‍ಗಳಿಸಿದ್ದಾರೆ. ಇದಲ್ಲದೆ 100 ಶತಕಗಳು ಮತ್ತು 201 ವಿಕೆಟ್ ಕೂಡ ಕಬಳಿಸುವ ಮೂಲಕ ಭಾರತದ ಕ್ರಿಕೆಟ್‍ಗೆ ಕೊಡುಗೆಯನ್ನು ಕೊಟ್ಟಿದ್ದಾರೆ.

ಸಚಿನ್ ಕಳೆದ ಬಾರಿ ಕೊರೊನಾ ಸೋಂಕು ದೇಶದಾದ್ಯಂತ ಹರಡಿಕೊಂಡಿದ್ದ ಕಾರಣ ಹುಟ್ಟುಹಬ್ಬ ಆಚರಿಸದೆ ಕೊರೊನಾ ವಾರಿಯರ್ಸ್‍ಗಳಿಗೆ ಮತ್ತು ಫ್ರೆಂಟ್‍ಲೈನ್ ವರ್ಕಸ್‍ಗಳಿಗೆ ಗೌರವ ಕೊಡುವ ನಿರ್ಧಾರ ಮಾಡಿಕೊಂಡಿದ್ದರು. ಇದೀಗ ದೇಶದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದೆ. ಕೆಲದಿನಗಳ ಹಿಂದೆ ಸಚಿನ್ ಅವರು ಕೂಡ ಸೋಂಕಿತರಾಗಿ ಆಸ್ಪತ್ರೆ ಸೇರಿದ್ದರು ಇದೀಗ ಸೋಂಕು ಗುಣವಾಗಿದ್ದು ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ.

ಇದೀಗ ಮುಂಬೈನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಡುವೆ ಸಚಿನ್ ಅವರು ಅಭಿಮಾನಿಗಳೊಂದಿಗೆ ಈ ಬಾರಿಯು ಹುಟ್ಟುಹಬ್ಬ ಆಚರಿಸದೆ ಇರಲು ನಿರ್ಧಾರಿಸಿದ್ದಾರೆ. ಹಾಗಾಗಿ ಅಭಿಮಾನಿಗಳು, ಕ್ರಿಕೆಟಿಗರು, ಸೆಲೆಬ್ರಿಟಿಗಳು ಸೇರಿದಂತೆ ಸಾವಿರಾರು ಮಂದಿ ಶುಭಾಶಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಬಿಸಿಸಿಐ ಅವರ ಸಾಧನೆಯ ಪಟ್ಟಿಯನ್ನು ಹಾಕಿಕೊಂಡು ವಿಶ್ ಮಾಡಿದರೆ, ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಸಚಿನ್‍ರೊಂದಿಗೆ ಜೊತೆಯಾಗಿ ಆಡಿದ ದಿನಗಳ ಚಿತ್ರಗಳನ್ನು ಹಾಕಿಕೊಂಡು ಶುಭಾಶಯ ತಿಳಿಸಿದ್ದಾರೆ.

ಸಚಿನ್ ಕೆಲ ತಿಂಗಳ ಹಿಂದೆ ನಡೆದ ರೋಡ್ ಸೇಪ್ಟಿ ಸೀರಿಸ್‍ನಲ್ಲಿ ಭಾರತದ ಪರ ಬ್ಯಾಟ್‍ಬೀಸಿದ್ದರು ಭಾರತ ಲೆಜೆಂಡ್ ತಂಡ ಈ ಕ್ರಿಕೆಟ್ ಸರಣಿಯ ಚಾಂಪಿಯನ್ ಕೂಡ ಆಗಿತ್ತು. ಈ ಸರಣಿಯಲ್ಲಿ ಸಚಿನ್ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಗಮನಸೆಳೆದಿದ್ದರು.

Comments

Leave a Reply

Your email address will not be published. Required fields are marked *