ಮಿರರ್ ಮುಂದೆ ನಿಂತು ಹೈಟ್ ಚೆಕ್ ಮಾಡ್ಕೊಂಡ ಅರವಿಂದ್, ದಿವ್ಯಾ ಉರುಡುಗ!

ಬಿಗ್‍ಬಾಸ್ ಮನೆಯ ಕ್ಯೂಟೆಸ್ಟ್ ಪೇರ್ ಅಂದರೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಎಂದೇ ಹೇಳಬಹುದು. ಬಿಗ್‍ಬಾಸ್ ನೀಡಿದ್ದ ಜೋಡಿ ಟಾಸ್ಕ್ ವೇಳೆ ಇಬ್ಬರು ಒಬ್ಬರಿಗೊಬ್ಬರು ಬಹಳ ಹಚ್ಚಿಕೊಂಡಿದ್ದು, ಇದೀಗ ಎಲ್ಲಿ ನೋಡಿದರೂ ಜೊತೆ ಜೊತೆಯಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಇವರಿಬ್ಬರ ನಡುವಿನ ಹೊಂದಾಣಿಕೆ, ಹಾವಭಾವ ಎಲ್ಲವನ್ನು ಗಮನಿಸಿದ ಮನೆ ಮಂದಿ ಇಬ್ಬರು ಒಂದಾದರೆ ಜೋಡಿ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ. ಸದ್ಯ ನಿನ್ನೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಬಾತ್‍ರೂಮ್ ಏರಿಯಾದ ಮಿರರ್ ಮುಂದೆ ನಿಂತು ಹೈಟ್ ಚೆಕ್ ಮಾಡಿಕೊಂಡಿದ್ದಾರೆ.

ದಿವ್ಯಾ ಉರುಡುಗ ಅರವಿಂದ್ ಮುಂದೆ ನಿಂತು ನಾನು ನಿಮ್ಮ ಬಾಯಿಯಷ್ಟು ಎತ್ತರ ಬರುತ್ತೇನೆ ಎಂದಾಗ, ಅರವಿಂದ್ ಇಲ್ಲ ನೀನು ಇನ್ನೂ ಕುಳ್ಳಗೆ ಇದ್ದೀಯಾ, ನನ್ನ ಕಿವಿ ಕೆಳಗೆ ಬರುತ್ತೀಯಾ ಎಂದು ಹೇಳುತ್ತಾರೆ. ಆಗ ದಿವ್ಯಾ ಉರುಡುಗ ಇಲ್ಲ ನಾನು ನಿಮ್ಮ ಮೂಗಿನ ತನಕ ಬರುತ್ತೇನೆ ಎನ್ನುತ್ತಾ ಹೈಟ್ ನೋಡುತ್ತಾರೆ.

ಬಳಿಕ ನಾನು ನಿಮ್ಮ ಮುಂದೆ ನಿಂತಾಗ ನೀವು ತಲೆ ಎತ್ತಿತ್ತೀರಾ ಎಂದು ಹೇಳುತ್ತಾ ಮತ್ತೆ ನಿಲ್ಲುತ್ತಾರೆ. ಇಲ್ಲ ಈಗಲೂ ನೀನು ನನ್ನ ಅಪ್ಪರ್ ಲಿಪ್‍ಗಿಂತ ಕೆಳಗೆ ಬರುತ್ತೀಯಾ ಎಂದು ಅರವಿಂದ್ ದಿವ್ಯಾ ಜೊತೆ ವಾದ ಮಾಡುವಾಗ, ಸ್ಲಿಪರ್ ನೋಡಿ ಅಯ್ಯೋ ಕಾಲಿನಲ್ಲಿ ಹಿಲ್ಸ್ ಸ್ಲಿಪ್ಪರ್ ಹಾಕಿಕೊಂಡಿದ್ದೀಯಾ ಅದು ತೆಗೆ ಎಂದು ಹೇಳುತ್ತಾರೆ. ಇದಕ್ಕೆ ದಿವ್ಯಾ ನೀವು ಶೂ ಹಾಕಿಕೊಂಡಿದ್ದೀರಾ ನೀವು ತೆಗೆಯಿರಿ ಎಂದು ಇಬ್ಬರು ಸ್ಲಿಪ್ಪರ್ ಬಿಚ್ಚಿ ಹೈಟ್ ಚೆಕ್ ಮಾಡುತ್ತಾರೆ.

ಕೊನೆಗೆ ಸ್ಲಿಪ್ಪರ್ ಬಿಚ್ಚಿದಾಗ ದಿವ್ಯ ಉರುಡುಗ ಅರವಿಂದ್ ಅವರ ಬಾಯಿಯಿಂದ ಕೆಳಗೆ ಬರುತ್ತಾರೆ. ಆಗ ಅರವಿಂದ್ ಈಗ ನೀನು ನನ್ನ ಲೋವರ್ ಲಿಪ್‍ಗೆ ಬರುತ್ತೀಯಾ ಎಂದು ವಾದಿಸಿದರೆ, ದಿವ್ಯಾ ಇಲ್ಲ ನಾನು ಅದಕ್ಕಿಂತಲೂ ಮೇಲೆ ಬರುತ್ತೇನೆ ಎಂದು ವಾದಿಸುತ್ತಾರೆ. ಒಟ್ಟಾರೆ ಇವರಿಬ್ಬರ ಮುದ್ದಾದ ಕಿತ್ತಾಟ ಮುಗಿಯುವುದು ಇಲ್ಲ ಎಂಬಂತೆ ಮುಂದುವರಿಸುತ್ತಾರೆ.

Comments

Leave a Reply

Your email address will not be published. Required fields are marked *