ಕಲಬುರಗಿಯಲ್ಲಿ ಬೆಡ್ ಸಿಗದೇ ನರಳಾಟ – ಆಸ್ಪತ್ರೆಯಲ್ಲಿ ಸಿಗ್ತಿಲ್ಲ ಫ್ರೀ ಮೆಡಿಸಿನ್

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ 600ಕ್ಕಿಂತ ಹೆಚ್ಚು ಬರುತ್ತಿದ್ದರೂ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗ್ತಿಲ್ಲ.

ಜಿಮ್ಸ್‍ನಲ್ಲಿ 200 ಹಾಗೂ ಇಎಸ್‍ಐನಲ್ಲಿ 150 ಬೆಡ್‍ಗಳ ವ್ಯವಸ್ಥೆ ಮಾತ್ರ ಮಾಡಿಕೊಂಡಿದೆ. ಜಿಮ್ಸ್ ಆಸ್ಪತ್ರೆ ಮುಂದೆ ಐಸಿಯು ಬೆಡ್ ಸಿಗದೇ 55 ವರ್ಷದ ಮಹಿಳೆಯೊಬ್ರು ಸತತ 3 ಗಂಟೆಗಳ ಕಾಲ ಆಟೋದಲ್ಲೇ ಕೂತು ನರಳಾಡಿದ್ರು.

ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಜಿಮ್ಸ್ ಆಸ್ಪತ್ರೆ ಮಹಿಳಾ ರೋಗಿಯನ್ನ ದಾಖಲಿಸಿಕೊಂಡ್ರು. ಮತ್ತೊಂದೆಡೆ 2 ದಿನಗಳಿಂದ ಕಲಬುರಗಿ ಸುತ್ತಾಡಿದ್ರೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಂದೇ ಒಂದು ಬೆಡ್ ಸಿಕ್ಕಿಲ್ಲ. ಇದರಿಂದ ತಂದೆಯೊಂದಿಗೆ ಬಂದ ಮಗಳು ವಾಪಸ್ ಮನೆಗೆ ತೆರಳಿದ್ರು.

ಒಟ್ಟಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಜಿಮ್ಸ್ ಆಸ್ಪತ್ರೆಗೆ ಹೋದ್ರೆ ಬೆಡ್ ಸಿಗ್ತಿಲ್ಲ. ಕೊರೊನಾವನ್ನೇ ಬಂಡವಾಳ ಮಾಡಿಕೊಂಡ ಜಿಮ್ಸ್ ಸಿಬ್ಬಂದಿ, ಜನಸಾಮಾನ್ಯರ ರಕ್ತ ಹೀರುತ್ತಿದ್ದಾರೆ. ಒಂದು ವೇಳೆ ಬೆಡ್ ಸಿಕ್ರೂ ಇಲ್ಲಿ ಮೆಡಿಸಿನ್ ಉಚಿತವಾಗಿ ಸಿಗಲ್ಲ. ಖಾಸಗಿ ಮೆಡಿಕಲ್ ಶಾಪ್‍ಗಳಿಗೆ ಹೋಗಿ ಇಂಜೆಕ್ಷನ್ ಹಾಗೂ ಡ್ರಿಪ್‍ಗಳನ್ನು ತರಬೇಕಾದ ಪರಿಸ್ಥಿತಿ ಇದೆ.

Comments

Leave a Reply

Your email address will not be published. Required fields are marked *