ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಸ್ಫೋಟಗೊಳ್ಳುತ್ತಿದೆ. ಆದರೆ ಜನರಿಗೆ ಮಾತ್ರ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಪ್ರತಿನಿತ್ಯ ಕೋವಿಡ್ ಪ್ರಕರಣಗಳು ಅರ್ಧ ಶತಕ ದಾಟುತ್ತಿವೆ. ಈ ಹಿನ್ನೆಲೆ ನಗರದ ನಿವಾಸಿಗಳು ಸ್ವಲ್ಪ ಎಚ್ಚೆತ್ತುಕೊಂಡು ನಗರದ ಪ್ರದೇಶಗಳಿಗೆ ಬರುವುದಕ್ಕೆ ಹಿಂದೆಟ್ಟು ಹಾಕುತ್ತಿದ್ದಾರೆ. ಅದರೆ ಗ್ರಾಮೀಣ ಭಾಗದ ಜನರು ಮಾತ್ರ ಎಲ್ಲಾ ಮರೆತು. ಎಂದಿನಂತೆ ಓಡಾಟ ನಡೆಸುತ್ತಿದ್ದಾರೆ.ಅಷ್ಟೇ ಅಲ್ಲದೆ ಸಂತೆಗಳಲ್ಲಿ ಮಾತ್ರ ಜನರು ಜಾತ್ರೆಯಲ್ಲಿ ಸೇರುವಂತೆ ಸೇರುತ್ತಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದಲ್ಲಿ ಭಾನುವಾರ ನಡೆದ ಸಂತೆಯಲ್ಲಿ ಜನಜಂಗುಳಿಯೇ ಸೇರಿತ್ತು. ಆದರೆ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ಧರಿಸಿದ್ದವರು ಸರಿಯಾಗಿ ಧರಿಸಿರಲಿಲ್ಲ. ಸಂತೆಯಲ್ಲಿ ಕೇವಲ ಗ್ರಾಹಕರಷ್ಟೇ ಅಲ್ಲ, ವ್ಯಾಪಾರಿಗಳು ಕೂಡ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವಂತೂ ಇರಲೇ ಇಲ್ಲ. ಯಾವುದಕ್ಕೂ ಕೇರ್ ಜನರು ಮುಗಿಬಿದ್ದು ಸಂತೆ ವ್ಯಾಪಾರದಲ್ಲಿ ತೊಡಗಿದ್ದರು.

ಇಷ್ಟೊಂದು ನಿಯಮ ಉಲ್ಲಂಘನೆಯಾಗುತ್ತಿದ್ದರೂ, ಪಂಚಾಯಿತಿ ಪಿಡಿಓ ಆಗಲಿ, ಸುಂಟಿಕೋಪ್ಪದ ಪೊಲೀಸರಾಗಲೀ ಯಾರೊಬ್ಬರೂ ಅಲ್ಲಿ ಸುಳಿದಾಡುತ್ತಿಲ್ಲ. ಜಿಲ್ಲಾಡಳಿತ ಮಾತ್ರ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಯಿಗೊಂಡಿದ್ದೇವೆ ಎನ್ನುತ್ತಿರುವಾಗ ಗ್ರಾಮೀಣ ಭಾಗದಲ್ಲೇ ಈ ರೀತಿಯಲ್ಲಿ ಪಂಚಾಯತಿಯ ಅಧಿಕಾರಿಗಳು ದಂಡ ಹಾಕುವುದನ್ನು ಬಿಟ್ಟಿರುವುದರಿಂದ ಜನರಿ ಮೈಮರೆತು ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲೇ ಮುಂದಿನ ದಿನಗಳಲ್ಲಿ ಕೊರೊನಾ ಸ್ಫೋಟ ಅಗುತ್ತೆ ಎನ್ನುವುದು ಸಾರ್ವಜನಿಕರ ಅತಂಕಕ್ಕೆ ಕಾರಣವಾಗಿದೆ.

Leave a Reply