ನಟ ಸೋನು ಸೂದ್‍ಗೆ ಕೊರೊನಾ ಪಾಸಿಟಿವ್

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

ನನ್ನ ಕೊರೊನಾ ವರದಿ ಪಾಸಿಟಿಟವ್ ಬಂದಿದೆ. ಹೀಗಾಗಿ ನಾನು ಸ್ವಯಂ ಕ್ವಾರಂಟೈನ್ ನಲ್ಲಿದ್ದು, ಯಾರೂ ಆತಂಕಕ್ಕೊಳಗಾಗೋದು ಬೇಡ. ನಿಮ್ಮ ಸಮಸ್ಯೆ ಪರಿಹರಿಸಲು ಮೊದಲಿಗಿಂತ ಹೆಚ್ಚು ಸಮಯ ಸಿಗಲಿದೆ. ನಿಮ್ಮ ಯಾವುದೇ ಕಷ್ಟಗಳಿಗೆ ನಾನು ನಿಮ್ಮೊಂದಿಗೆ ಇದ್ದೇನೆ ಅನ್ನೋದನ್ನ ಮರೆಯಬೇಡಿ ಎಂದು ಕ್ವಾರಂಟೈನ್ ಸಮಯವನ್ನ ಲಾಭದಾಯಕವಾಗಿ ಮತ್ತು ಸಮಾಜ ಸೇವೆಗಾಗಿ ಬಳಸಿಕೊಳ್ಳುವ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಸರ್ಕಾರ ಲಾಕ್‍ಡೌನ್ ವಿಧಿಸಿತ್ತು. ಪರಿಣಾಮ ಅಸಂಖ್ಯಾತ ಕೂಲಿ ಕಾರ್ಮಿಕರು ತಮ್ಮ ಗ್ರಾಮಗಳಿಗೆ ತೆರಳಲಾಗದೇ, ಒಂದೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದರು. ಇಂತಹ ಸಮಯದಲ್ಲಿ ವಲಸೆ ಕಾರ್ಮಿಕರ ನೆರವಿಗೆ ಸೋನು ಸೂದ್ ಆಗಮಿಸಿದ್ದರು.

Comments

Leave a Reply

Your email address will not be published. Required fields are marked *