ಬಿಗ್‍ಬಾಸ್ ನೀಡಿದ ಟಾಸ್ಕ್ ನಿಂದ್ಲೇ ಹತ್ತಿರವಾಗ್ತಿದ್ದಾರಾ ಅರವಿಂದ್, ದಿವ್ಯಾ?

– ದಿವ್ಯಾಗೆ ಊಟ ಮಾಡಿಸಿದ ಅರವಿಂದ್

ಬಿಗ್‍ಬಾಸ್ ನೀಡಿದ ಜೋಡಿ ಟಾಸ್ಕ್ ಮೂಲಕ ಒಂದಾಗಿದ್ದ ಅರವಿಂದ್ ಹಾಗೂ ದಿವ್ಯಾ ಉರುಡುಗ, ಇದೀಗ ಮತ್ತೆ ಬಿಗ್‍ಬಾಸ್ ನೀಡಿದ ಟಾಸ್ಕ್ ಮೂಲಕವೇ ಇನ್ನಷ್ಟು ಹತ್ತಿರವಾಗ್ತಿದ್ದಾರೆ ಅನ್ನೋ ಗುಮಾನಿ ಎದ್ದಿದೆ.

ನಿನ್ನೆ ಬಿಗ್‍ಬಾಸ್ ಶುಭಾ ಪೂಂಜಾರವರಿಗೆ ಕನ್ಫೆಷನ್ ರೂಮ್‍ಗೆ ಕರೆದು ಒಂದು ಪ್ಲೇಟ್‍ನಲ್ಲಿ ಚಿಕನ್ ನೀಡಿ, ಮುಂದಿನ ಆದೇಶದವರೆಗೂ ಮನೆಯ ಸದಸ್ಯರು ಚಿಕನ್‍ನನ್ನು ಒಬ್ಬೊಬ್ಬರು ಬಜರ್ ಆದ ಬಳಿಕ ವರ್ಗಾಹಿಸಿಕೊಂಡು ಕೆಳಗೆ ಇಡದಂತೆ ನೋಡಿಕೊಳ್ಳಬೇಕು. ಹೀಗೆ ಜಾಗೃತರಾಗಿ ನೋಡಿಕೊಂಡರೆ ಲಕ್ಷುರಿ ಬಜೆಟ್‍ನಲ್ಲಿ ಕಳೆದುಕೊಂಡಿರುವ ಚಿಕನ್‍ನನ್ನು ಹಿಂಪಡೆಯಬಹುದು ಎಂದು ತಿಳಿಸಿದ್ದರು.

ಅದರಂತೆ ಮೊದಲಿಗೆ ಶುಭಾ ಚಿಕನ್‍ನನ್ನು ಕೈಯಲ್ಲಿ ಇಟ್ಟುಕೊಂಡು ಜೋಪಾನವಾಗಿ ನೋಡಿಕೊಂಡರು. ಬಳಿಕ ಬಜರ್ ಆದನಂತರ ದಿವ್ಯಾ ಉರುಡಗೆ ಚಿಕನ್ ಪ್ಲೇಟ್‍ನನ್ನು ಪಾಸ್ ಮಾಡಿದರು. ಚಿಕನ್ ನೋಡಿ ದಿವ್ಯಾ ಉರುಡಗ ಖುಷಿಖುಷಿಯಿಂದ ಸ್ವೀಕರಿಸಿ ಅರವಿಂದ್ ಪಕ್ಕದಲ್ಲಿ ಕುಳಿತುಕೊಳ್ಳಲು ಬರುತ್ತಾರೆ. ಆಗ ದಿವ್ಯಾ ಕುಳಿತುಕೊಳ್ಳಲು ಮೈಕ್ ಅಡ್ಡ ಬರುತ್ತದೆ ಎಂದು ಅರವಿಂದ್ ದಿವ್ಯಾ ಮೈಕ್‍ನನ್ನು ಪಕ್ಕಕ್ಕೆ ಸರಿಸುತ್ತಾರೆ.

ನಂತರ ದಿವ್ಯಾ ನನ್ನ ಕೆನ್ನೆ ಮೇಲೆ ಸೊಳ್ಳೆ ಕಚ್ಚುತ್ತಿರುವುದಾಗಿ ತಿಳಿಸಿದಾಗ, ಅರವಿಂದ್ ಕೂಡಲೇ ಎಲ್ಲಿ ಎಂದು ಕೆನ್ನೆ, ಹಣೆ ಹಾಗೂ ಗಲ್ಲದ ಮೇಲೆ ಕೈನಲ್ಲಿ ಸವರುತ್ತಾರೆ. ಬಳಿಕ ಬಾಯಿಯಿಂದ ಗಾಳಿಯನ್ನು ಊದಿ, ಯಾವ ಸೊಳ್ಳೆಯು ಇಲ್ಲ ಎಂದು ಹೇಳುತ್ತಾರೆ. ಇದಾದ ನಂತರ ಮನೆಯಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವು ಊಟ ಮಾಡುತ್ತಿರುತ್ತಾರೆ. ಈ ವೇಳೆ ಅರವಿಂದ್ ತಾವು ಊಟ ಮಾಡದೇ ಅನ್ನ, ಸಾಂಬಾರ್ ತಂದು ದಿವ್ಯಾ ಉರುಡುಗಗೆ ಒಂದೊಂದೇ ತುತ್ತು ತಿನ್ನಿಸಿದ್ದಾರೆ.

ಒಟ್ಟಾರೆ ಈ ಕ್ಯೂಟ್ ಪೇರ್ ಒಬ್ಬರ ಮೇಲೊಬ್ಬರು ಹೊಂದಿರುವ ಕಾಳಜಿ ನೋಡಿ ಫಿದಾ ಆಗಿರುವ ಪ್ರೇಕ್ಷಕರು, ಈ ಜೋಡಿಗೆ ದೃಷ್ಟಿ ತಾಗದಿರಲಿ ಎಂದು ಆಶಿಸುತ್ತಿದ್ದಾರೆ ಎಂದೇ ಹೇಳಬಹುದು.

Comments

Leave a Reply

Your email address will not be published. Required fields are marked *