ದುಬಾರಿ ಬೆಲೆ ಮಾಸ್ಕ್ ಹಾಕಿ ಕರೀನಾ ಕೊಟ್ರು ಸ್ಪೆಷಲ್ ಮೆಸೇಜ್

ಮುಂಬೈ: ಬರೋಬ್ಬರಿ ಕಾಲು ಲಕ್ಷದ ಮಾಸ್ಕ್ ಧರಿಸಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅಭಿಮಾನಿಗಳಿಗೆ ಸ್ಪೆಷಲ್ ಮೆಸೇಜ್ ಕೊಟ್ಟಿದ್ದಾರೆ. ಕರೀನಾ ಅವರ ಮೆಸೇಜ್‍ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬೆಬೋ ತನ್ನ ಸೆಲ್ಫಿಯನ್ನು ಹಂಚಿಕೊಂಡಿದ್ದು…ಪ್ರಚಾರವಿಲ್ಲ, ಸುಮ್ನೆ ಮಾಸ್ಕ್ ಹಾಕಿಕೊಳ್ಳಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಸೂಚಿಸಿ ನೆಟ್ಟಿಗರು ಬೆಬೋ ಇದ್ದಕ್ಕಿದ್ದ ಹಾಗೆ ಹೀಗೆ ಹೇಳಲು ಕಾರಣವೇನು ಎಂದು ಚರ್ಚೆ ಮಾಡುತ್ತಿದ್ದಾರೆ.

ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವವ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೊಂಚ ವಿಭಿನ್ನವಾಗಿ ಜಾಗೃತಿಯನ್ನು ಮೂಡಿಸಿದ್ದಾರೆ. ಬಾಲಿವುಡ್ ಕಲಾವಿದರಲ್ಲಿ ಹಲವರಿಗೆ ಈಗಾಗಲೇ ಸೋಂಕು ಕಾಣಿಸಿಕೊಂಡಿದೆ.

ಕರೀನಾ ಧರಿಸಿರುವ ಈ ಮಾಸ್ಕ್ ಬೆಲೆ 26 ಸಾವಿರ ರೂಪಾಯಿ ಆಗಿದೆ. ಕರೀನಾ ಅವರಲ್ಲದೆ, ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ ಮುಂತಾದ ಹಲವಾರು ಪ್ರಸಿದ್ಧ ವ್ಯಕ್ತಿಗಳು ಈ ದುಬಾರಿ ಬೆಲೆಯ ಮಾಸ್ಕ್ ಬಳಸುತ್ತಿದ್ದಾರೆ. ಈ ಮಾಸ್ಕ್ ಮರುಬಳಕೆ ಮಾಡಬಹುದಾಗಿದೆ ಮತ್ತು ತನ್ನದೇ ಆದ ರೇಷ್ಮೆ ಬ್ಯಾಗ್ ಕೂಡಾ ಹೊಂದಿದೆ.

Comments

Leave a Reply

Your email address will not be published. Required fields are marked *