ಬೆಂಗಳೂರು: ಎಂದಿನಂತೆ ಕೊರೊನಾ ಆರ್ಭಟ ಮುಂದುವರಿದಿದ್ದು, ಇಂದು ಸಹ 4,373 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಂದು ರಾಜ್ಯದಲ್ಲಿ 19 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 36,614ಕ್ಕೆ ಏರಿಕೆಯಾಗಿದ್ದು, 327 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,10,602ಕ್ಕೆ ಏರಿಯಾಗಿದೆ. ಈ ವರೆಗೆ ಕೊರೊನಾಗೆ 12,610 ಜನ ಸಾವನ್ನಪ್ಪಿದ್ದಾರೆ. ಇಂದು 1,959 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.3.53 ಮತ್ತು ಮರಣ ಪ್ರಮಾಣ ಶೇ.0.43ರಷ್ಟಿದೆ. ಇಂದು 1,23,830 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರಿನಲ್ಲೇ 3,002 ಮಂದಿಗೆ ಸೋಂಕು ತಗುಲಿದೆ. ಬೀದರ್, ಕಲಬುರಗಿ, ಮೈಸೂರು ಹಾಗೂ ತುಮಕೂರು ಒಟ್ಟು 4 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 8, ಬಳ್ಳಾರಿ 23, ಬೆಳಗಾವಿ 30, ಬೆಂಗಳೂರು ಗ್ರಾಮಾಂತರ 54, ಬೆಂಗಳೂರು ನಗರ 3,002, ಬೀದರ್ 172, ಚಾಮರಾಜನಗರ 18, ಚಿಕ್ಕಬಳ್ಳಾಪುರ 13, ಚಿಕ್ಕಮಗಳೂರು 36, ಚಿತ್ರದುರ್ಗ 14, ದಕ್ಷಿಣ ಕನ್ನಡ 83, ದಾವಣಗೆರೆ 29, ಧಾರವಾಡ 39, ಗದಗ 9, ಹಾಸನ 59, ಹಾವೇರಿ 4, ಕಲಬುರಗಿ 151, ಕೊಡಗು 11, ಕೋಲಾರ 37, ಕೊಪ್ಪಳ 32, ಮಂಡ್ಯ 36, ಮೈಸೂರು 171, ರಾಯಚೂರು 19, ರಾಮನಗರ 7, ಶಿವಮೊಗ್ಗ 36, ತುಮಕೂರು 167, ಉಡುಪಿ 53, ಉತ್ತರ ಕನ್ನಡ 29, ವಿಜಯಪುರ 18 ಮತ್ತು ಯಾದಗಿರಿಯಲ್ಲಿ 13 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Leave a Reply