ಕೋಲಾರ: ನಟಿ ಹಾಗೂ ಬರಗಾರ್ತಿ ಬಿಗ್ಬಾಸ್ ಸೀಸನ್-7ರ ಸ್ಪರ್ಧಿ ಚೈತ್ರಾ ಕೊಟ್ಟೂರು ಭಾನುವಾರ ಬೆಳಗ್ಗೆ ನಾಗಾರ್ಜುನ್ ಎಂಬ ಉದ್ಯಮಿ ಜೊತೆಗೆ ಸಪ್ತಪದಿ ತುಳಿದಿದ್ದರು. ಆದರೆ ವಿಪರ್ಯಾಸ ಸಂಜೆ ವೇಳೆ ಜೋಡಿ ಮಧ್ಯೆ ಬಿರುಕು ಮೂಡಿ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿತು. ಸದ್ಯ ಈ ಕುರಿತಂತೆ ಚೈತ್ರಾ ಕೊಟ್ಟೂರು ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್ ಬಾಸ್ ಮುಗಿಸಿ ಬಂದ ನಂತರ ನನಗೆ ನಾಗಾರ್ಜುನ್ ಪರಿಚಯವಾಯಿತು. ಬೇರೆ ಯಾವ ಕಾರಣಗಳು ಇರದೆ ಪರಸ್ಪರ ವ್ಯಕ್ತಿತ್ವಕ್ಕೆ ಇಬ್ಬರು ಆಕರ್ಶಿತವಾದೆವು. ನಂತರ ಹಾಗೇ ಆಪ್ತತೆ ಬೆಳೆಯುತ್ತಾ ಹೋಯಿತು. ಹೊರಗೆ ಭೇಟಿ ಮಾಡುವುದು, ಮನೆಯಲ್ಲಿ ಭೇಟಿ ಮಾಡುವುದು ಹೀಗೆ ನಡೆಯುತಿತ್ತು. ಎಲ್ಲಾ ಚೆನ್ನಾಗಿಯೇ ಇತ್ತು. ಪರಸ್ಪರ ಪ್ರೀತಿ ಆಪ್ತತೆ ಅತೀವವಾಗಿತ್ತು. ಅಲ್ಲದೆ ಆತನ ಹುಟ್ಟು ಹಬ್ಬವನ್ನ ನಾನು ಅದ್ಧೂರಿಯಾಗಿ ಆಚರಿಸಿದ್ದೆ, ಒಂದು ಚಿನ್ನದ ಬ್ರೇಸ್ ಲೆಟ್ ಕೂಡ ಉಡುಗೊರೆಯಾಗಿ ಕೊಟ್ಟಿದ್ದೆ. ಆ ಆಚರಣೆಯ ಫೋಟೊಗಳನ್ನು ನನ್ನ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೆ ಮತ್ತು ಅದನ್ನು ಸುದ್ಧಿ ಕೂಡ ಮಾಡಿದ್ದರು. ಆಪ್ತವಾಗಿದ್ದ ಹುಡುಗ ಮದುವೆ ಎನ್ನುವ ವಿಚಾರ ಗಂಭೀರವಾಗಿತ್ತಿದ್ದಂತೆ ಬೇರೆಯ ರೀತಿ ನಡೆದುಕೊಳ್ಳಲು ಶುರುಮಾಡಿದ. ಮನೆಯವರ ನೆಪ, ಜಾತಿ ನೆಪ, ಅಂತಸ್ಥಿನ ನೆಪ… ಹೀಗೆ ವಿಷಯ ಇನ್ನು ಗಂಭೀರವಾಗುತ್ತಿದ್ದಂತೆ ನಾನು ಸಿನಿಮಾದವಳು ಎಂಬ ನೆಪ ಆತನಿಂದ ಮಾತ್ರವಲ್ಲ, ಆತನ ಮನೆಯವರಿಂದಲೂ ಶುರುವಾಯ್ತು. ಒಮ್ಮೆ ಆಯ್ತು ಅನ್ನೊದು, ಒಮ್ಮೆ ಇಲ್ಲ ಅನ್ನೋದು ಮಾಡುತ್ತಿದ್ದ. ಈ ಸಮಸ್ಯೆ ನನ್ನ ಸ್ನೇಹಿತರ ಬಳಿ ಹಂಚಿಕೊಂಡಾಗ ಮದುವೆಯಾಗಿಬಿಡಿ ಎಲ್ಲಾ ಸರಿಹೋಗುತ್ತದೆ ಅಂತ ಸೂಚಿಸಿದರು.

“ಈಗೇನು ಮದುವೆ ಆಗಬೇಕು ಅಷ್ಟೇ ತಾನೆ? ಸರಿ ಆಗ್ತೀನಿ” ಎಂದು ಮದುವೆ ಆದ. ತದನಂತರ ಆ ಹುಡುಗನ ಮನೆಯವರು ಬಂದೊಡನೆ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ನೀನು ನಡತೆಗೆಟ್ಟವಳು, ಸಿನಿಮಾದವಳು. ನನ್ನ ಸೊಸೆ ಆಗುವುದಕ್ಕೆ ಯೋಗ್ಯತೆ ಇಲ್ಲದವಳು. ನನ್ನ ಮಗನ ತಂಟೆಗೆ ಬಂದರೆ ಕೊಲೆ ಮಾಡುತ್ತೇವೆ ಇತ್ಯಾದಿ ರೀತಿ ಬೈದು, ಒಂದಕ್ಕೆ ನೂರು ಹೇಳಿ ಹುಡುಗ ತನ್ನ ನಿಲುವನ್ನೇ ಬದಲಿಸುವಂತೆ ಮಾಡಿದರು. ಇದು ಬಲವಂತದ ಮದುವೆ ಇತ್ಯಾದಿ ಇತ್ಯಾದಿ ಅವನ ತಲೆಗೆ ತುಂಬಿದರು. ಆತನು ಅವರಂತೆ ಆಡಲು ಶುರು ಮಾಡಿದ.

ತದನಂತರ ನಿಮ್ಮ ಮನೆಯಲ್ಲಿ ಕೂತು ಮಾತಾಡಿ ಬಗೆಹರಿಸೋಣ ಎಂದು ಬಂದವರು, ನಮ್ಮ ಮನೆಯ ಬಳಿ ಇಡೀ ರಸ್ತೆ ನೋಡುವಂತೆ ಕಿರುಚಿ ಕೂಗಾಡಿ ಗಲಾಟೆ ಮಾಡಿ ನನ್ನನ್ನು ಮತ್ತು ನನ್ಮ ಅಣ್ಣಂದಿರನ್ನು ಹೊಡೆದು, ನನ್ನ ವಯಸ್ಸಾದ ತಂದೆ ತಾಯಿಯನ್ನು ನೂಕಾಡಿ ತಳ್ಳಾಡಿ ಬೀಳಿಸಿ, ಗಾಯಗಳನ್ನು ಮಾಡಿ, ನನಗೆ ಕೊಲೆ ಬೆದರಿಕೆ ಹಾಕಿ, ನಮ್ಮ ಇಡೀ ಏರಿಯಾ ನಿಂತು ನೋಡುವಂತೆ ಮಾನಮರ್ಯಾದೆ ಹರಾಜು ಹಾಕಿ ಹೋದರು. ಬಳಿಕ ನಾನು ಸೀದಾ ಕಂಪ್ಲೆಂಟ್ ಕೊಡಲು ಹೋದಾಗ, ಹುಡುಗನ ಭಾವಂದಿರು ಕಂಪ್ಲೆಂಟ್ ಕೊಡುವ ಮುನ್ನ ಒಂದೆರಡು ದಿನ ಸಮಯ ತಗೆದುಕೊಂಡು ನಾವುಗಳು ಕುಟುಂಬದವರು ಕೂತು ಮಾತಾನಾಡೋಣ ಎಂದು ನನ್ನನ್ನು ಕೇಳಿಕೊಂಡಾಗ ನಾನು ಆಯ್ತು ಎಂದು ಒಪ್ಪಿದಾಗ ಪೋಲಿಸರು ನೀವುಗಳು ಇನ್ನೆರಡು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಕೊಂಡು ಬನ್ನಿ ಇಲ್ಲವಾದಲ್ಲಿ ನಾವು ಕಂಪ್ಲೆಂಟ್ ಲಾಡ್ಜ್ ಮಾಡುತ್ತೇವೆ ಎಂದು ಹೇಳಿದರು.

ನಾನು ಕೊಡುವ ದೂರನ್ನು, ತಡೆದು ಕೂತು ಮಾತಾಡೋಣ ಎಂದು ಹೋಲ್ಡ್ ನಲ್ಲಿ ಇಟ್ಟವರು, ನಂತರ ತಾವು ಹೋಗಿ ದೂರು ಕೊಟ್ಟಿದ್ದಾರೆ. ಈ ಸುದ್ದಿ ತಿಳಿದು ನನಗೆ ಮನಸ್ಸಿಗೆ ಬೇಸರವಾಯಿತು. ಅವರ ಮನೆಯವರ ಡಬಲ್ ಗೇಮ್ ಮತ್ತೆ ಮತ್ತೆ ಸಾಬೀತಾದಂತಾಯಿತು. ಈಗ ಎರಡು ದಿನಗಳ ಅವಕಾಶ ಇರುವುದರಿಂದ ಅವರು ಮಾತಾಡಲು ಬಂದರೆ ಮಾತಾಡುತ್ತೇವೆ. ಇಲ್ಲವಾದಲ್ಲಿ ಮುಂದೆ ಮಾಡಬೇಕಾದ ಕ್ರಮದ ಕುರಿತು ಯೋಚಿಸುತ್ತೇವೆ ಎಂದು ಚೈತ್ರಾ ಹೇಳಿದ್ದಾರೆ.

ಚೈತ್ರಾ ಕೊಟ್ಟೂರು ಅವರು ಸ್ನೇಹಿತರಿಗೆ ವಾಟ್ಸಪ್ ಮೂಲಕ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಇಬ್ಬರು ಜೊತೆಯಲ್ಲಿರುವ ಫೋಟೋಗಳನ್ನು ಕಳುಹಿಸಿ ಈ ಫೋಟೋ ವಿಡಿಯೋಗಳನ್ನು ಎಲ್ಲೆಡೆ ಕಳುಹಿಸಿ ಎಂದು ಮಸೇಜ್ ಮಾಡಿದ್ದಾರೆ.

Leave a Reply