ನ್ಯೂಯಾರ್ಕ್ ನಾಸ್ಡಾಕ್ ಕಟ್ಟಡದ ಸ್ಕ್ರೀನ್ ಮೇಲೆ 3ಡಿಯಲ್ಲಿ ರಾಮ್‍ಚರಣ್!

ಹೈದರಾಬಾದ್: ಟಾಲಿವುಡ್ ನಟ ಮೆಗಾ ಪವರ್ ಸ್ಟಾರ್ ರಾಮ್‍ಚರಣ್ ತೇಜ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಮ್‍ಚರಣ್ ಹುಟ್ಟುಹಬ್ಬಕ್ಕೆ ಸೋಶಿಯಲ್ ಮೀಡಿಯದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಸದ್ಯ ರಾಮ್‍ಚರಣ್ ತೇಜ ಹುಟ್ಟುಹಬ್ಬದ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಶೇಷವೆಂದರೆ ನ್ಯೂಯಾರ್ಕ್‍ನ ಐಕಾನಿಕ್ ಟೈಮ್ಸ್ ಸ್ಕ್ವೇರ್‍ನ ನಾಸ್ಡಾಕ್ ಕಟ್ಟಡದ ಮೇಲೆ ರಾಮ್‍ಚರಣ್ ತೇಜರ ಫೋಟೋವನ್ನು 3ಡಿಯಲ್ಲಿ ಬಿಗ್ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗಿದೆ. ಇದನ್ನು ಕಂಡು ರಾಮ್‍ಚರಣ್ ತೇಜ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಕೂಡ ತಮ್ಮ ಮುಂದಿನ ಆಚಾರ್ಯ ಸಿನಿಮಾದ ಪೋಸ್ಟರ್‍ನನ್ನು ಹಂಚಿಕೊಳ್ಳುವ ಮೂಲಕ ಮಗನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಶಿವ ನಿರ್ದೇಶಿಸುತ್ತಿದ್ದು, ಪೂಜಾ ಹೆಗ್ಡೆ ರಾಮ್‍ಚರಣ್‍ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಇಬ್ಬರು ಸಿನಿಮಾದ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ನಟಿ ಕಾಜಲ್ ಅಗರ್‍ವಾಲ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಚಾರ್ಯ ಸಿನಿಮಾ ಮೇ 13ರಂದು ಬಿಗ್ ಸ್ಕ್ರೀನ್ ಮೇಲೆ ತೆರೆ ಬರಲಿದೆ.

ರಾಮ್‍ಚರಣ್ ತೇಜ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಆರ್‍ಆರ್‍ಆರ್ ಚಿತ್ರತಂಡ ನಿನ್ನೆ ಪೋಸ್ಟರ್‍ನನ್ನು ರಿಲೀಸ್ ಮಾಡುವ ಮೂಲಕ ವಿಶ್ ಮಾಡಿದೆ. ಪೋಸ್ಟರ್‍ನಲ್ಲಿ ರಾಮ್‍ಚರಣ್ ತೇಜ ರಾಮನ ಅವತಾರದಲ್ಲಿ ಮಿಂಚಿದ್ದಾರೆ. ಇನ್ನೂ ಈ ಸಿನಿಮಾದ ಮತ್ತೋರ್ವ ಪ್ರಮುಖ ನಾಯಕನಾಗಿ ಜ್ಯೂನಿಯರ್ ಎನ್‍ಟಿಆರ್ ಅಭಿನಯಿಸಿದ್ದು, ಎಸ್‍ಎಸ್ ರಾಜಮೌಳಿ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಾಲಿವುಡ್ ಖ್ಯಾತ ನಿರ್ದೇಶಕ ಶಂಕರ್ ಅವರು ರಾಮ್ ಚರಣ್ ಅವರ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

 

View this post on Instagram

 

A post shared by RRR Movie (@rrrmovie)

ಈ ಹಿಂದೆ ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಪ್ರವೇಶಿಸಿ 25 ವರ್ಷ ಪೂರೈಸಿದ ಹಿನ್ನೆಲೆ ದುಬೈನ ಬುರ್ಜ್ ಖಲೀಫಾ ಕಟ್ಟದ ಪರದೆ ಮೇಲೆ ಕಿಚ್ಚ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಟೀಸರ್‍ನನ್ನು ಬಿಡುಗಡೆಗೊಳಿಸಲಾಗಿತ್ತು.

Comments

Leave a Reply

Your email address will not be published. Required fields are marked *