ಐ ಲವ್ ಯೂ, ಐ ಮಿಸ್ ಯೂ – 2.5 ಕಿ.ಮೀ ರಸ್ತೆಯುದ್ದಕ್ಕೂ ಬರೆದ ಪಾಗಲ್ ಪ್ರೇಮಿ

ಮುಂಬೈ: ಸಾಮಾನ್ಯವಾಗಿ ಪ್ರೀತಿ ಮಾಡುವವರು ತಮ್ಮ ಸಂಗಾತಿಯನ್ನು ಆಕರ್ಷಿಸಲು ಸರ್ ಪ್ರೈಸ್‍ಗಳನ್ನು ನೀಡುವುದು, ಗಿಫ್ಟ್ ನೀಡುವುದು ಹೀಗೆ ಹಲವಾರು ರೀತಿಯ ಸರ್ಕಸ್‍ಗಳನ್ನು ಮಾಡುತ್ತಾರೆ. ಆದರೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ವ್ಯಕ್ತಿಯೋರ್ವ ತನ್ನ ಭಾವನೆಗಳನ್ನು ಗೆಳತಿ ಮುಂದೆ ವಿಭಿನ್ನ ಶೈಲಿಯಲ್ಲಿ ವ್ಯಕ್ತಪಡಿಸಿದ್ದಾನೆ.

ಕೊಲ್ಹಾಪುರದ ಶಿರೋಲ್ ತಹಸಿಲ್‍ನ ಧರಂಗುಟ್ಟಿಯಲ್ಲಿ ವ್ಯಕ್ತಿಯೋರ್ವ ಸಿನಿಮಾ ಮಾದರಿ 2.5 ಕಿ.ಮೀ ವಿಸ್ತಾರದ ಹಳ್ಳಿಯ ಮುಖ್ಯ ರಸ್ತೆಯುದ್ದಕ್ಕೂ ಪೇಯಿಂಟ್‍ನಲ್ಲಿ ‘ಐ ಲವ್ ಯೂ’ ಹಾಗೂ ‘ಐ ಮಿಸ್ ಯೂ’ ಎಂದು ಬರೆದಿದ್ದಾನೆ. ಅಲ್ಲದೆ ‘ಐ ಮಿಸ್ ಯೂ’ ಜೀವನದೊಂದಿಗೆ, ಜೀವನದ ನಂತರವೂ ಎಂಬ ಸಂದೇಶವೊಂದನ್ನು ಬರೆದಿದ್ದಾನೆ.

ಈ ಸಂದೇಶವನ್ನು ಬಿಳಿಯ ಆಯಿಲ್ ಪೇಯಿಂಟ್‍ನಲ್ಲಿ ಜೈಸಿಂಗ್‍ಪುರದಿಂದ ಧರಂಗುಟ್ಟಿದ 2.5ಕಿ.ಮೀ ಮಾರ್ಗದವರೆಗೂ ಬರೆಯಲಾಗಿದೆ. ಘಟನೆ ಕುರಿತಂತೆ ಗ್ರಾಮಸ್ಥರು ಮುಖ್ಯ ರಸ್ತೆಯಲ್ಲಿ ಹಿಂದೆ ಎಂದೂ ಕಾಣಿಸದ ಈ ಬರಹಗಳನ್ನು ಬರೆದಿರುವ ಪಾಗಲ್ ಪ್ರೇಮಿ ಯಾರಿರಬಹುದು ಎಂದು ಅಚ್ಚರಿಗೊಂಡಿದ್ದಾರೆ. ಜೊತೆಗೆ ಈ ಕಿಡಿಗೇಡಿ ಕೃತ್ಯದ ಹಿಂದೆ ಗ್ರಾಮದ ಕೆಲವು ಯುವಕರು ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Comments

Leave a Reply

Your email address will not be published. Required fields are marked *