ಮಹಿಳೆಯರ ಗುಪ್ತಾಂಗದ ಫೋಟೋ ತೆಗೆಯುತ್ತಿದ್ದ ಗೈನಾಕಾಲಜಿಸ್ಟ್ ಅರೆಸ್ಟ್

– 700ಕ್ಕೂ ಹೆಚ್ಚು ಮಹಿಳೆಯರಿಂದ ದೂರು

ಲಾಸ್‍ಏಂಜಲೀಸ್: ಗುಪ್ತಾಂಗಗಳನ್ನು ಸ್ಪರ್ಶಿಸಿ ಫೋಟೋ ತೆಗೆದು, ಲೈಂಗಿಕ ಕಿರುಕುಳ ನೀಡುತ್ತಿದ್ದ ಗೈನಕಾಲಜಿಸ್ಟ್‍ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿಯನ್ನು ಟಿಂಡಲ್(74) ಎಂದು ಗುರುತಿಸಲಾಗಿದೆ. ದಕ್ಷಿಣ ಕ್ಯಾಲೀಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಗೈನಾಕಾಲಜಿಸ್ಟ್ ಆಗಿದ್ದ ಈತನ ವಿರುದ್ಧ 700ಕ್ಕೂ ಹೆಚ್ಚು ಮಹಿಳೆಯರು ದೂರು ನೀಡಿದ್ದಾರೆ. ಇದೀಗ ವಿಶ್ವವಿದ್ಯಾಲಯ 7,200 ಕೋಟಿ ದಂಡವನ್ನು ತೆರಬೇಕಾಗಿದೆ.

ಟಿಂಡಲ್ ಲೈಂಗಿಕ ದೌರ್ಜನ್ಯ ಸಂಬಂಧಿಸಿದಂತೆ 35 ಪ್ರಕರಣಗಳು ಇವನ ಮೇಲಿದೆ. 2009 ರಿಂದ 2016ರ ತನಕ ಹೆಲ್ತ್ ಸೆಂಟರ್ ನಲ್ಲಿದ್ದ ಈತ ಬಹಳಷ್ಟು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಚಿಕಿತ್ಸೆಗೆಂದು ಬರುತ್ತಿದ್ದ ಹೆಣ್ಣು ಮಕ್ಕಳ ಗುಪ್ತಾಂಗಗಳನ್ನು ಮುಟ್ಟುತ್ತಿದ್ದನು. ಅಲ್ಲದೆ ಫೋಟೋವನ್ನು ಕೂಡ ತೆಗೆಯುತ್ತಿದ್ದನು ಎಂದು ಈತನ ಮೇಲೆ ಆರೋಪ ಕೇಳಿಬಂದಿದೆ. ಟಿಂಡಾಲ್ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಮರ್ಪಕವಾಗಿ ಸ್ಪಂದಿಸಲು ವಿಫಲವಾದ ಕಾರಣ ರೋಗಿಗಳು ವಿಶ್ವವಿದ್ಯಾಲಯದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಟಿಂಡಲ್ ಮಾತ್ರ ತನ್ನ ಮೇಲೆ ಬಂದಿರುವ ಅಪವಾದವನ್ನು ನಿರಾಕರಿಸಿದ್ದಾರೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *