ಅಕ್ರಮ ಸಂಬಂಧ ಶಂಕೆ- ಪತ್ನಿಯ ಜನನಾಂಗವನ್ನೇ ಹೊಲಿದ ಪತಿ

– ಅಲ್ಯೂಮಿನಿಯಂ ದಾರದಿಂದ ಜನನಾಂಗ ಹೊಲಿದ
– ಕೈ ಕಾಲು ಕಟ್ಟಿ ರಕ್ತಸ್ರಾವವಾಗುವ ವರೆಗೆ ಹಿಂಸೆ

ಲಕ್ನೋ: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿ ಅಲ್ಯೂಮಿನಿಯಂ ದಾರದಿಂದ ತನ್ನ ಪತ್ನಿಯ ಜನನಾಂಗವನ್ನೇ ಹೊಲಿದಿರುವ ಆಘಾತಕಾರಿ ಘಟನೆ ನಡೆದಿದೆ.

ಉತ್ತರ ಪ್ರದೇಶದ ರಾಮ್‍ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಚಾಲಕನಾಗಿ ಕೆಲಸ ಮಾಡುವ ವ್ಯಕ್ತಿ ಫೆಡಲಿಟಿ ಟೆಸ್ಟ್ ಮಾಡಿಸುವಂತೆ ಕೇಳಿದ್ದು ಇದಕ್ಕೆ ಪತ್ನಿಯೂ ಒಪ್ಪಿದ್ದಾಳೆ. ನಂತರ ಇದಕ್ಕೆ ಸಮಾಧನಗೊಳ್ಳದ ಕ್ರೂರಿ ಪತಿ, ಪತ್ನಿಯ ಕೈ, ಕಾಲುಗಳನ್ನು ಕಟ್ಟಿ ಅವಳ ಜನನಾಂಗವನ್ನು ಅಲ್ಯೂಮಿನಿಯಂ ದಾರದಿಂದ ಹೊಲಿದಿದ್ದಾನೆ. ರಕ್ತಸ್ರಾವ ಹೆಚ್ಚಾದ ಬಳಿಕ ಅವಳನ್ನು ಬಿಟ್ಟಿದ್ದಾನೆ. ಅಲ್ಲದೆ ರಕ್ತಸ್ರಾವ ಹೆಚ್ಚಾಗುತ್ತಿದ್ದಂತೆ ಪತ್ನಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಘಟನೆ ಬಳಿಕ 24 ವರ್ಷದ ಮಹಿಳೆ ಹತ್ತಿರ ಊರಿನಲ್ಲಿದ್ದ ತನ್ನ ತಾಯಿಗೆ ಈ ವಿಷಯವನ್ನು ತಿಳಿಸಿದ್ದು, ಬಳಿಕ ತಾಯಿ ಮನೆಗೆ ಆಗಮಿಸಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ನಂತರ ಅಳಿಯನ ವಿರುದ್ಧ ಮಿಲಾಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರ ಮನವಿ ಮೇರೆಗೆ ಜಿಲ್ಲಾಸ್ಪತ್ರೆಯ ವೈದ್ಯರು ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ.

ವೈದ್ಯರು ಹಲ್ಲೆಯಾಗಿರುವುದನ್ನು ಖಚಿತಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಐಪಿಸಿ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದ ಮರುದಿನವೇ ಆರೋಪಿಯನ್ನು ಬಂಧಿಸಲಾಗಿದೆ.

ಯಾವುದೇ ಕಾರಣವಿಲ್ಲದೆ ನನ್ನ ಪತಿ ತುಂಬಾ ಹೊಡೆಯುತ್ತಿದ್ದ, ನಾನು ಅನೈತಿಕ ಸಂಬಂಧ ಹೊಂದಿದ್ದೇನೆ ಎಂದು ಅನುಮಾನ ಪಟ್ಟು, ಫೆಡಲಿಟಿ ಟೆಸ್ಟ್ ಮಾಡಿಸುವಂತೆ ಪೀಡಿಸುತ್ತಿದ್ದ. ಈ ರೀತಿ ಕ್ರೂರವಾಗಿ ವರ್ತಿಸುತ್ತಾನೆ ಎಂದು ನಾನು ಊಹಿಸಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.

ಮಹಿಳೆ ಆರೋಪಿಯನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಇತ್ತೀಚೆಗೆ ಮಗು ಜನಿಸಿತ್ತು. ಆದರೆ ಹೆರಿಗೆಯಾಗುತ್ತಿದ್ದಂತೆ ಸಾವನ್ನಪ್ಪಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಿಳೆಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯಕೀಯ ಪರೀಕ್ಷೆ ವೇಳೆ ತಿಳಿದಿದೆ. ಆಕೆಯ ಪತಿಯನ್ನು ಬಂಧಿಸಲಾಗಿದ್ದು, ಜೈಲಿನಲ್ಲಿಡಲಾಗಿದೆ. ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ರಾಮ್‍ಪುರ ಎಸ್‍ಪಿ ಖಚಿತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *