ಬೆಂಗಳೂರಿನಲ್ಲಿ ಭಾರತದ ಮೊದಲ ಎಸಿ ರೈಲ್ವೆ ನಿಲ್ದಾಣ

ಬೆಂಗಳೂರು: ರೈಲ್ವೆ ಸಚಿವ ಪಿಯೂಷ್ ಗೋಯಲ್ ನಗರದಲ್ಲಿ ನಿರ್ಮಾಣವಾಗುತ್ತಿರುವ 314 ಕೋಟಿ ರೂ ವೆಚ್ಚದ ರೈಲ್ವೆ ನಿಲ್ದಾಣವು ದೇಶದ ಮೊದಲ ಹವಾನಿಯಂತ್ರಿತ(ಏಸಿ)  ರೈಲ್ವೇ ನಿಲ್ದಾಣವಾಗಲಿದೆ  ಎಂದು ತಿಳಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಭಾರತದ ಮೊಟ್ಟ ಮೊದಲ ಕೇಂದ್ರೀಕೃತ ಹವಾನಿಯಂತ್ರಿತ ರೈಲ್ವೆ ನಿಲ್ದಾಣಕ್ಕೆ ಆದಷ್ಟು ಬೇಗ ಚಾಲನೆ ನೀಡಲಾಗುತ್ತದೆ ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಬೈಯಪ್ಪನಹಳ್ಳಿಯ ಹೊಸ ಟರ್ಮಿನಲ್‍ಗೆ 2015-16ರಂದು ಅನುಮತಿ ನೀಡಲಾಗಿದ್ದು, ಈ ರೈಲ್ವೆ ನಿಲ್ದಾಣ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿಯೇ ನಿರ್ಮಿಸಲಾಗಿದೆ. ಅಲ್ಲದೆ ಪ್ಲಾಟ್‍ಫಾರಂಗಳು, ಶೌಚಾಲಯ, ವಿಶ್ರಾಂತಿ ಕೋಣೆ, ಪಾರ್ಕಿಂಗ್, ಬಸ್‍ಬೇ ಹೀಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದ್ದು, ವಿಮಾನ ನಿಲ್ದಾಣದ ಮಾದರಿಯಲ್ಲಿಯೇ ರೈಲ್ವೆ ನಿಲ್ದಾಣವನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ಒಂದು ಹನಿ ನೀರು ಹೊರ ಬೀಳಲ್ಲ – ಮೈಸೂರು, ಬೆಂಗಳೂರು ಹಳಿ ನಿರ್ವಹಣೆಗೆ ಗೋಯಲ್‌ ಮೆಚ್ಚುಗೆ

ಮೆಜಿಸ್ಟಿಕ್‍ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಯಶವಂತಪುರ ರೈಲು ನಿಲ್ದಾಣದ ಬಳಿಕ ಬೈಯಪ್ಪನಹಳ್ಳಿಯ ಟರ್ಮಿನಲ್ ನಗರದ ಮೂರನೇ ರೈಲ್ವೆ ನಿಲ್ದಾಣವಾಗಿದೆ. ಜೊತೆಗೆ 4200 ಚದರ ಮೀಟರ್ ವ್ಯಾಪ್ತಿ ಇರುವ ಈ ನಿಲ್ದಾಣದಲ್ಲಿ ಏಳು ಪ್ಲಾಟ್‍ಫಾರಂ, ಏಳು ಸ್ಲಾಬಿಂಗ್ ಲೈನ್, ಮೂರು ಪಿನ್‍ಲೈನ್‍ಗಳಿವೆ ಹಾಗೂ ಎಲ್ಲಾ ಕಡೆ ಎಲ್‍ಇಡಿ ಲೈಟ್‍ಗಳನ್ನು ಅಳವಡಿಸಲಾಗಿದೆ.

ವಿಐಪಿ ಲಾಂಚ್, ಫುಡ್‍ಕೋರ್ಟ್, ಎಸ್ಕಲೇಟರ್, ಲಿಫ್ಟ್, ಫ್ಲಾಟ್‍ಫಾರಂ ಹಾಗೂ ಸಬ್ ವೇಗಳನ್ನು ನಿರ್ಮಿಸಲಾಗಿದ್ದು, 50 ರೈಲು ಸಂಚರಿಸುವ ವ್ಯವಸ್ಥೆ, ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನ, 250ಕ್ಕೂ ಹೆಚ್ಚು ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಕೊಡಲಾಗಿದೆ.

Comments

Leave a Reply

Your email address will not be published. Required fields are marked *