ಧಾರವಾಡ: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೆಲ ಬದಲಾವಣೆ ತರಲು ಬಯಸಿದ್ದೇವೆ. ಸಿಂಗಲ್ ವಿಂಡೋ ಸಿಸ್ಟಮ್ ತರುವ ಪ್ಲಾನ್ ಇದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ.

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಿರಾಣಿ, ಗಣಿ ಇಲಾಖೆ ಜೊತೆಯಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಕೂಡಾ ಬರುತ್ತಿವೆ, ಗಣಿ ಲೈಸನ್ಸ್ ಗೆ ಆಫ್‍ಲೈನ್ ಹಾಗೂ ಆನ್‍ಲೈನ್ ಎರಡು ರೀತಿಯಲ್ಲಿ ಅನುಮತಿ ಪಡೆಯಬಹುದು. 30 ದಿನದಲ್ಲಿ ಈ ಗಣಿ ನಿಯಮ ಜಾರಿಗೆ ತರುತ್ತೇವೆ ಅದರ ಡ್ರಾಫ್ಟ್ ಕೂಡಾ ತಯಾರಿದೆ ಎಂದು ಮಾಹಿತಿ ಹಂಚಿಕೊಂಡರು.

ಗಣಿ ಅನುಮತಿ ಪಡೆಯುವವರಿಗೆ ತೊಂದರೆಯಾಗದಂತೆ ಗಣಿ ನಿಯಮವನ್ನು ಸರಳೀಕರಣ ಮಾಡುತ್ತಿದ್ದೇವೆ ಜಿಂದಾಲ್, ಬಲ್ದೋಟಾ, ಕಿರ್ಲೊಸ್ಕರ್ ಕಂಪನಿಗಳು ಹಾಗೂ ಇತರ ಕಂಪನಿಗಳ ಜೊತೆ ಸಭೆ ನಡೆಸಿದ್ದೇವೆ. ಅದಿರು ಹೊರಗಿನಿಂದ ತರುವುದಕ್ಕೆ ಬೆಲೆ ಹೆಚ್ಚಾಗುತ್ತದೆ ಎಂಬ ಮಾಹಿತಿ ಇದೆ ಇದನ್ನು ಕೂಡಾ ಸಿಎಂ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಸ್ಕೂಲ್ ಆಫ್ ಮೈನಿಂಗ್ ಮಾಡಿದರೆ ಅಕ್ರಮ ಮೈನಿಂಗ್ ಆಗುವುದನ್ನು ಬದಲಾವಣೆ ತರಬಹುದು, ಈ ಹಿನ್ನೆಲೆ ಎಲ್ಲ ಕಡೆ ವರ್ಕ್‍ಶಾಪ್ ಮಾಡಿ ಅಧಿಕಾರಿಗಳಿಗೆ ಹಾಗೂ ಮೈನಿಂಗ್ ಮಾಡುವವರಿಗೆ ತರಬೇತಿ ನೀಡುತ್ತಿದ್ದೇವೆ. ಗಣಿ ಮಾಲಿಕರು ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ 12 ಸಾವಿರ ಕೋಟಿ ರೂಪಾಯಿ ರಾಯಲ್ಟಿ ಕಟ್ಡಿದ್ದಾರೆ. ಅದರ ಬಡ್ಡಿ ಸೇರಿ ಆ ಹಣ 18 ಸಾವಿರ ಕೋಟಿ ಆಗಿದೆ. ಮೂರು ತಿಂಗಳಲ್ಲಿ ಆ ಹಣ ನಮ್ಮ ಕೈ ಸೇರುವ ನಿರೀಕ್ಷೆ ಇದೆ, ಆ ಹಣವನ್ನು ಕ್ರಿಯಾ ಯೋಜನೆಗೆ ಬಳಕೆ ಮಾಡಿಕೊಂಡು ಕೆಲಸಗಳನ್ನು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply