ಪ್ರಶಾಂತ್ ಸಂಬರ್ಗಿ ಭೂಮಿ ತಾಯಿ ಮೇಲೆ ಆಣೆ ಹಾಕಿದ್ದೇಕೆ?

ಬೆಂಗಳೂರು: ಬಿಗ್ ಮನೆಯಲ್ಲಿ ವೈರಸ್ ವರ್ಸಸ್ ಮನುಷ್ಯರ ನಡುವಿನ ಟಾಸ್ಕ್ ಬಹಳ ರೋಚಕತೆಯನ್ನು ಪಡೆದುಕೊಳ್ಳುತ್ತಿದ್ದಂತೆ, ಸ್ಪರ್ಧಿಗಳ ನಡುವೆ ಕಿರಿಕ್ ಹೆಚ್ಚಾಗತೊಡಗಿದೆ. ಎರಡು ತಂಡಗಳ ಸದಸ್ಯರ ನಡುವೆ ನಡೆಯುತ್ತಿರುವ ಕಿರಿಕ್ ಬಿಗ್ ಮನೆಯ ಕೂತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

ವೈರಸ್ ವರ್ಸಸ್ ಮನುಷ್ಯರ ನಡುವಿನ ಟಾಸ್ಕ್‍ನಲ್ಲಿ ವೈರಸ್ ತಂಡದ ಸಂಬರ್ಗಿ ಮತ್ತು ಮನುಷ್ಯ ತಂಡದ ಲ್ಯಾಗ್ ಮಂಜು ನಡುವೆ ಮಾತಿನ ಚಕಮಕಿ ಜೋರಾಗಿ, ಆಣೆ ಪ್ರಮಾಣ ಮಾಡುವ ಹಂತದ ವರೆಗೆ ಇಬ್ಬರು ಮಾತುಕತೆ ಮುಂದುವರಿಸಿದ್ದಾರೆ. ಮಂಜು ಟಾಸ್ಕ್ ಪ್ರಕಾರ ನಾವು ಮಾಡಿರುವುದು ಸರಿಯಾಗಿದೆ ಎಂದರೆ, ಸಂಬರ್ಗಿ ಇಲ್ಲ ನಾನು ಮಾಡಿರುವುದೇ ಸರಿಯಾಗಿದೆ ಎಂದು ಭೂಮಿ ತಾಯಿ ಮತ್ತು ನಾನು ಮಾಡುವ ವ್ಯಾಪಾರದ ಮೇಲೆ ಆಣೆ ಮಾಡುತ್ತೇನೆಂದು ಮಂಜು ವಿರುದ್ಧ ತೊಡೆ ತಟ್ಟಿದ್ದಾರೆ.

ಸಂಬರ್ಗಿ ಆಟದ ನಿಯಮವನ್ನು ಮಂಜು ಅವರಿಗೆ ಅರ್ಥ ಮಾಡಿಸುತ್ತಾ ಇದು ರಗ್ಬಿ ಆಟದ ತರ ಈ ಆಟದಲ್ಲಿ ಯಾವ ತಂಡಕ್ಕೂ ಗೆಲುವು ಸೋಲು ಇಲ್ಲ ಎಂದು ಹೇಳುತ್ತಿದ್ದಂತೆ ಸಂಬರ್ಗಿ ಮಾತಿಗೆ ಮನುಷ್ಯ ತಂಡದ ಸದಸ್ಯರು ಚಪ್ಪಾಳೆ ತಟ್ಟಿ ವ್ಯಂಗ್ಯಮಾಡಿದ್ದಾರೆ. ಇದರಿಂದ ಮತ್ತೆ ಕೆರಳಿದ ಸಂಬರ್ಗಿ, ಮಂಜು ಜೊತೆ ಮತ್ತೆ ಮಾತಿನ ಸಮರಕ್ಕೆ ಮುಂದಾಗಿ ನಿನು ಬಿಗ್‍ಬಾಸ್ ಮನೆಯಲ್ಲಿ ತಲೆ ಕೆಟ್ಟೊಗಿದೆ ಎಂದು 1 ಲಕ್ಷ ಬಾರಿ ಹೇಳಿದ್ದೀಯ ಅದನ್ನು ಹೊರತು ಪಡಿಸಿ ಬೇರೆ ಡೈಲಾಗ್ ಹೇಳು ಆಗ ನಿನ್ನ ಕಾಮಿಡಿಯನ್ ಹೆಸರನ್ನು ಒಪ್ಪಿಕೊಳ್ಳುತ್ತೆನೆ ಎಂದು ಟಕ್ಕರ್ ಕೊಟ್ಟರು. ನಂತರ ಮಂಜು ಸಂಬರ್ಗಿ ಅವರಿಗೆ ನೀವು ಆಟವಾಡಿದ ನಿಯಮ ಸರಿಯಿದೆ ಎಂದು ಹೇಳಿ ಆಗ ನಾನು ಒಪ್ಪಿಕೊಳ್ಳುತ್ತೇನೆಂದು ತಿರುಗೇಟು ನೀಡಿದ್ದಾರೆ.

ಮಂಜು ಅವರ ಮಾತನ್ನು ಕೇಳುತ್ತಿದ್ದಂತೆ ಸಂಬರ್ಗಿ ಆಣೆ ಪ್ರಮಾಣಕ್ಕೆ ಮುಂದಾಗಿದ್ದಾರೆ, ಮಂಜು ಸಂಬರ್ಗಿ ಮೇಲೆ ಆಣೆ ಹಾಕುದಾಗಿ ಹೇಳಿದ್ದಾರೆ ಈ ನಡುವೆ ಎರಡು ತಂಡದ ಸದಸ್ಯರು ಮಧ್ಯಪ್ರವೇಶಿಸುವ ಮೂಲಕ ಮಾತಿನ ಜಗಳಕ್ಕೆ ಬ್ರೇಕ್ ಬಿದ್ದಿದೆ.

Comments

Leave a Reply

Your email address will not be published. Required fields are marked *