ಮದ್ವೆಯಾಗಿ ನೋಡ್ಕೋತ್ತಿನಿ-73ರ ಅಜ್ಜನಿಂದ 1.3 ಕೋಟಿ ಪಡೆದ ಆಂಟಿ ಜೂಟ್

– ಹಳ್ಳಿಗೆ ಹೋಗಿ ಅಂಕಲ್ ಜೊತೆ ಆಂಟಿ ಕಲ್ಯಾಣ

ಮುಂಬೈ: ಮಹಿಳೆಯೋರ್ವಳು 73 ವರ್ಷದ ವ್ಯಕ್ತಿಗೆ ಮದುವೆಯಾಗುತ್ತೇನೆ. ವೃದ್ಧಾಪ್ಯದಲ್ಲಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿ 1.3 ಕೋಟಿ ರೂ. ಪಡೆದು ಪರಾರಿ ಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

 

ಶಾಲಿನಿ ಸಿಂಗ್ ಹಣವನ್ನು ಪಡೆದು ನಾಪತ್ತೆಯಾಗಿರುವ ಮಹಿಳೆ. ಜೆರೋನ್ ಡಿಸೋಜಾ ಅಂಧೇರಿ(73) ಅವರನ್ನು ಶಾಲಿನಿ ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾಳೆ. ಶಾಲಿನಿ ವಿರುದ್ಧವಾಗಿ ಡಿಸೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂಬೈನ ಮಲಾಡ್‍ನ ಮಾಲ್ವಾನಿ ನಿವಾಸಿ ಜೆರೋನ್ ಡಿಸೋಜಾ ಅಂಧೇರಿ ಅವರಿಗೆ ಶಾಲಿನಿ ಎನ್ನುವ ಮಹಿಳೆಯ ಪರಿಚಯವಾಗಿದೆ. ಮದುವೆಯಾಗುತ್ತೇನೆ ವೃದ್ಧಾಪ್ಯದಲ್ಲಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿದ್ದಾಳೆ. ನಂತರ 1 ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ಪಡೆದಿದ್ದಾಳೆ. ಕೆಲವು ದಿನಗಳ ನಂತರ ಶಾಲಿನಿ, ಡಿಸೋಜಾ ಅವರ ಸಂಪರ್ಕಕ್ಕೆ ಸಿಗದೆ ಇದ್ದಾಗ ಅನುಮಾನ ಗೊಂಡು ವಿಚಾರಿಸಿದಾಗ ಹಣದೊಂದಿಗೆ ಆಕೆ ತನ್ನ ಹಳ್ಳಿಗೆ ಹೋಗಿ ಬೇರೊಬ್ಬರನ್ನು ಮದುವೆಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಡಿಸೋಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *