ಎಲ್ಲೆಲ್ಲಿ ಯಾರ್ಯಾರಿಗೆ ಕರೆಂಟ್ ಹೊಡೆದಿದ್ಯೋ ಗೊತ್ತಿಲ್ಲ: ಜೆಡಿಎಸ್ ಶಾಸಕ ರವಿಂದ್ರ ಶ್ರೀಕಂಠಯ್ಯ

– ಹೊಸದಾಗಿ ಸಿಡಿ ಬಿಟ್ರೆ ನೋಡ್ತೀನಿ

ಮಂಡ್ಯ: ಎಲ್ಲೆಲ್ಲಿ ಯಾರ್ಯಾರಿಗೆ ಕರೆಂಟ್ ಹೊಡೆದಿದೆಯೋ ಗೊತ್ತಿಲ್ಲ. ಯಾಕೆ ಪಾಪ ಈ ರೀತಿ ತಪ್ಪು ಮಾಡಿಕೊಳ್ತಾರೋ ಎಂದು ಜೆಡಿಎಸ್ ಶಾಸಕ ರವಿಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಾಹದೇವಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬೆಗೆ ಹೋಗಿದ್ದವರೆಲ್ಲ ಕೋರ್ಟ್ ಮೊರೆ ಹೋಗಿದ್ದಾರೆ. ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ಕೊರ್ಟ್ ತಡೆ ಹೋಗಿರುವುದು ಬಹಳ ಹಾಸ್ಯ ಕಾಣ್ತಿದೆ ಎಂದರು.

ಸಿಡಿ ನೀವು ನೋಡಿದಾಗೇ ನಾನು ನೋಡಿದ್ದೀನಿ. ಅದಕ್ಕಿಂತ ಜಾಸ್ತಿ ಏನೂ ನನಗೆ ಗೊತ್ತಿಲ್ಲ. ಎಲ್ಲಿ ಯಾರ್ಯಾರಿಗೆ ಕರೆಂಟ್ ಹೊಡೆದಿದ್ಯೋ ನನಗೆ ಗೊತ್ತಿಲ್ಲ. ಯಾಕೇ ಪಾಪ ಈ ತರ ತಪ್ಪು ಮಾಡ್ಕೋಳ್ತಾರೋ. ನಾವು ಬಂದಿರುವುದು ಸಮಾಜ ಸೇವೆ ಮಾಡುವುದಕ್ಕೆ. ದೇವರು ಕೊಟ್ಟ ಅವಕಾಶದಲ್ಲಿ ಜನಗಳ ಸೇವೆ ಮಾಡಬೇಕು. ಜನ ಪ್ರತಿನಿಧಿಗಳು ಕೋರ್ಟ್ ಗೆ ಹೋಗಿ ತಡೆ ತರುವಂತ ಪರಿಸ್ಥಿತಿಯನ್ನ ಮಾಡ್ಕೋಳ್ಳಬಾರದು. ಇದು ರಾಜಕೀಯ ಕ್ಷೇತ್ರದಲ್ಲಿ ತಲೆ ತಗ್ಗಿಸುವಂತ ವಿಚಾರ ಇದು. ನೀವು ನೋಡಿರುವಾಗೆ ನಾನು ನೋಡಿದ್ದು, ಅಷ್ಟೇ ಹೊಸದಾಗಿ ಬಿಟ್ಟರೆ ನೋಡ್ತೇನೆ ಎಂದು ಹೇಳಿದರು.

ಮಾಜಿ ಸಚಿವ ಸೆಕ್ಸ್ ಸಿಡಿ ಹೊರ ಬಂದು ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಆಗುತ್ತಿದ್ದಂತೆಯೇ ಇತ್ತ 6 ಮಮದಿ ಸಚಿವರು ಕೋರ್ಟ್ ಮೊರೆ ಹೊಗಿದ್ದಾರೆ. ತಮ್ಮ ವಿರುದ್ಧ ಮಾಧ್ಯಮಗಳು ವರದಿ ಪ್ರಸಾರ ಮಾಡಬಾರದು ಎಂದು ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ನಾರಾಯಣಗೌಡ, ಭೈರತಿ ಬಸವರಾಜ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕೆಂದು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಆರು ಸಚಿವರಿಗೆ ಭೀತಿ ಹುಟ್ಟಿರುವುದು ಏಕೆ? ಇದ್ದಕ್ಕಿಂದ್ದಂತೆ ಯಾಕೆ ಕೋರ್ಟ್ ಮೊರೆ ಹೋಗಿದ್ದಾರೆ ಎಂಬುದು ಮತ್ತಷ್ಟು ಕುತೂಹಲ ಹುಟ್ಟಿಸಿದೆ.

Comments

Leave a Reply

Your email address will not be published. Required fields are marked *