ವ್ಯಕ್ತಿಯೊಂದಿಗೆ ನಡೆದುಕೊಂಡ ಹೋಗುತ್ತಿದ್ದ ಮೇಕೆಗಳ ಹಿಂಡು ಇಂಗ್ಲಿಷ್ ಹಾಡಿಗೆ ಸಖತ್ ಸ್ಟೆಪ್ ಹಾಕಿದೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಮುಸುಕುದಾರಿ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿದ್ದಂತೆ ಆತನ ಹಿಂದೆ ಮೇಕೆಗಳ ಗುಂಪೊಂದು ಹಿಂದುಗಡೆಯಿಂದ ಬರುತ್ತಿದೆ. ಹಾಗೆ ಮೇಕೆಗಳು ತಮ್ಮ ಕಾಲುಗಳನ್ನು ಮತ್ತು ತಲೆ ಕಿವಿಗಳನ್ನು ಹಾಡಿನ ಬೀಟ್‍ಗೆ ಗೆ ತಕ್ಕಂತೆ ಅಲ್ಲಾಡಿಸುತ್ತ ಕುಣಿಯುತ್ತಿರುವುದು ಕಂಡುಬಂದಿದೆ.
Enjoy Goat dance😉🤣😂 pic.twitter.com/ReWMGwQBNq
— Ambedkar Caravan (Ayodhya wale) (@Ambedkercarvan) July 20, 2020
ಹಾಡಿಗೆ ತಕ್ಕಂತೆ ಮೇಕೆಗಳು ತಮ್ಮ ಕಾಲುಗಳನ್ನು ಮತ್ತು ಕಿವಿಯನ್ನು ಸರಿಯಾಗಿ ಅಲ್ಲಾಡಿಸುತ್ತಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇದನ್ನು ಗಮನಿಸಿರುವ ನೆಟ್ಟಿಗರು ಹಲವು ಕಮೆಂಟ್‍ಗಳನ್ನು ಹಾಕುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಮನುಷ್ಯನಂತೆ ಪ್ರಾಣಿ ಪಕ್ಷಿಗಳು ಮಾಡುವ ಕೆಲವು ಸಹಜ ಪ್ರಕ್ರಿಯೆಗಳು ನೋಡುಗರಿಗೆ ಮನರಂಜನೆ ನೀಡುತ್ತಿದೆ.

Leave a Reply