ಸುಶಾಂತ್ ಕೇಸ್ – ಎನ್‍ಸಿಬಿಯಿಂದ 30 ಸಾವಿರ ಪುಟಗಳ ಚಾರ್ಚ್‍ಶೀಟ್ ಸಲ್ಲಿಕೆ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‍ಸಿಬಿ) 30,000 ಪುಟಗಳ ಚಾರ್ಚ್‍ಶೀಟ್‍ನ್ನು ಕೋರ್ಟಿಗೆ ಸಲ್ಲಿಸಿದೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ತಿಂಗಳು ಜೈಲುವಾಸ ಅನುಭವಿಸಿದ್ಧ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಅವರ ಹಸರು ಕೂಡ ಚಾರ್ಚ್‍ಶೀಟ್‍ನಲ್ಲಿ ಕಾಣಿಸಿಕೊಂಡಿದೆ. ಒಟ್ಟು 33 ಜನರ ವಿರುದ್ಧ ಚಾರ್ಚ್‍ಶೀಟ್ ನಲ್ಲಿ ಹೆಸರು ನಮೂದಿಸಿ ಎನ್‍ಸಿಬಿ ಕೋರ್ಟ್‍ಗೆ ಹಾಜರು ಪಡಿಸಿದೆ.

ಜಾರ್ಚ್‍ಶೀಟ್‍ನಲ್ಲಿ ರಿಯಾ ಚಕ್ರವರ್ತಿ ಹೆಸರು ಸೇರಿ ಹಲವು ಡ್ರಗ್ಸ್ ಪೆಡ್ಲರ್‍ ಗಳು ಮತ್ತು ಆರೋಪಿಗಳ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಿರುವ ಎನ್‍ಸಿಬಿ ಈ ಹಿಂದೆ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು.

ನಿಗೂಢವಾಗಿ ಸಾವಿಗೀಡಾಗಿದ್ದ ಸುಶಾಂತ್ ಸಿಂಗ್ ಮೃತದೇಹ ಮುಂಬೈನ ಬಾಂದ್ರಾ ನಿವಾಸದಲ್ಲಿ ಕಳೆದ ವರ್ಷ ಜೂನ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಯಾಮಗಳಲ್ಲಿ ತನಿಖೆ ನಡೆಸಿದಾಗ ಡ್ರಗ್ಸ್ ಮಾಫಿಯಾ, ಅಕ್ರಮ ಹಣ ವರ್ಗಾವಣೆ ಹೀಗೆ ಅನೇಕ ಆಯಾಮಗಳಲ್ಲಿ ಕೇಸ್ ವಿಸ್ತರಿಸುತ್ತಾ ಹೋಗಿತ್ತು. ಇಡಿ ಅಧಿಕಾರಿಗಳು ಎನ್‍ಸಿಬಿಗೆ ಪ್ರಕರಣದ ಕುರಿತಾದ ರಿಯಾ ಚರ್ಕವರ್ತಿಯ ಮೊಬೈಲ್ ಫೋನ್ ವಶಪಡಿಸಿ ಹಲವು ಮಾಹಿತಿ ಕೊಟ್ಟಿದ್ದರು. ಆ ಬಳಿಕ ಎನ್‍ಸಿಬಿ ರಿಯಾ ಚರ್ಕವರ್ತಿ ಸಹೋದರ ಶೌವಿಕ್ ಚಕ್ರವರ್ತಿ, ಜಯಂತಿ ಶಾ, ದೀಪೇಶ್ ಸಾವಂತ್, ಸ್ಯಾಮ್ಯುಯೆಲ್ ಮಿರಾಂಡಾ ಸೇರಿದಂತೆ ಹಲವು ಮಂದಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಇದೀಗ ಎನ್‍ಸಿಬಿ ಕೋರ್ಟ್‍ಗೆ 30,000 ಪುಟಗಳ ಚಾರ್ಚ್‍ಶೀಟ್ ಸಲ್ಲಿಸಿದೆ.

Comments

Leave a Reply

Your email address will not be published. Required fields are marked *