ವೀಡಿಯೋ: ಗೋಲ್ಗೊಪ್ಪ ಸವಿದು ಖುಷಿಪಟ್ಟ ಸ್ಮೃತಿ ಇರಾನಿ

ಲಕ್ನೋ: ರಾಜಕೀಯ ನಾಯಕರು ಅಂದ್ರೆ ಸಾಕು, ಸಿಕ್ಕಾಪಟ್ಟೆ ಬ್ಯುಸಿಯಿರುತ್ತಾರೆ. ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ನೊಂದವರ ಅಹವಾಲು ಸ್ವೀಕರಿಸುವುದು ಹಾಗೂ ಕ್ಷೇತ್ರ ಭೇಟಿ ಹೀಗೆ ತಮ್ಮದೇ ಕೆಲಸಗಳಲ್ಲಿ ದಿನ ಕಳೆಯುತ್ತಾರೆ. ಈ ಬ್ಯುಸಿಯ ನಡುವೆಯೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ನೆಚ್ಚಿನ ಗೋಲ್ಗೊಪ್ಪ ಸವಿದು ಖುಷಿಪಟ್ಟಿದ್ದಾರೆ.

ಭಾನುವಾರ ಸಚಿವೆ ವಾರಣಾಸಿಯ ಮಹದೇವ ದೇಗಲುಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿ ಅವರು ಗೋಲ್ಗೊಪ್ಪ ಸವಿದಿದ್ದು, ಇದರ ಫೋಟೋ ಹಾಗೂ ವೀಡಿಯೋವನ್ನು ತಮ್ಮ ಇನ್‍ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

 

View this post on Instagram

 

A post shared by India Today (@indiatoday)

ಕಾಶಿ ವಲಯದಲ್ಲಿ ಬರುವ 16 ಜಿಲ್ಲೆಗಳ ಬಿಜೆಪಿ ಕಚೇರಿ, ಸಂಸದರು ಹಾಗೂ ಶಾಸಕರ ಸಭೆಯಲ್ಲಿ ಭಾಗವಹಿಸಲೆಂದು ಸಚಿವೆ ಉತ್ತರಪ್ರದೇಶಕ್ಕೆ ತೆರಳಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಈ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದರು.

ಹೀಗೆ ತೆರಳಿದ್ದ ಸಂದರ್ಭದಲ್ಲಿ ಸಚಿವೆ ತಮ್ಮ ಕೆಲಸದ ನಡುವೆಯೇ ಅಲ್ಲೇ ಇದ್ದ ಪಾನಿಪುರಿ ಅಂಗಡಿಗೆ ಭೇಟಿ ಕೊಟ್ಟಿದ್ದಾರೆ. ಅಲ್ಲದೆ ಗೋಲ್ಗೊಪ್ಪವನ್ನು ಸವಿದಿದ್ದಾರೆ. ಈ ಸಂಬಂಧ ಮಾಧ್ಯಮದವರು ಅವರನ್ನು ಮಾತನಾಡಿಸಲು ಹೋದಾಗ ‘ಹರ್ ಹರ್ ಮಹಾದೇವ್’ ಎಂದು ಸಚಿವೆ ಅಲ್ಲಿಂದ ಹೋಗಿದ್ದಾರೆ.

ಬಳಿಕ ತಮ್ಮ ಇನ್‍ಸ್ಟಾದಲ್ಲಿ ಮಹಾದೇವ್ ದೇಗುಲಕ್ಕೆ ಭೇಟಿ ನೀಡಿದ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಕಾಶಿ ಕರೆದಾಗ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by Smriti Irani (@smritiiraniofficial)

Comments

Leave a Reply

Your email address will not be published. Required fields are marked *