ಪೊರಕೆಯಲ್ಲಿ ಏಟು ತಿನ್ನೋದು ಅಭ್ಯಾಸ ಆಗಿತ್ತು: ವೈಷ್ಣವಿ

ಬೆಂಗಳೂರು: ಬಿಗ್‍ಬಾಸ್ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, 17 ಸೆಲೆಬ್ರಿಟಿಗಳು ಬಿಗ್ ಮನೆ ಪ್ರವೇಶಿಸಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಒಂಟಿ ಮನೆ ಪ್ರವೇಶಕ್ಕೂ ಮುನ್ನ ಖಾಸಗಿ ಬದುಕಿನ ಹಲವು ವಿಚಾರಗಳನ್ನ ನಟ, ನಿರೂಪಕ ಸುದೀಪ್ ಜೊತೆ ಹಂಚಿಕೊಂಡಿದ್ದಾರೆ. ಬಾಲ್ಯದಲ್ಲಿ ಅಮ್ಮನ ಪೊರಕೆ ಏಟಿನ ಬಗ್ಗೆ ಹೇಳಿದ್ದಾರೆ.

ತಂದೆಯ ಮುಂದಿನ ಮಗಳು, ಆದ್ರೆ ಅಮ್ಮನ ಮಾತು ಮೀರಲ್ಲ. ಅಮ್ಮ ಹೇಳೋ ಎಲ್ಲ ಮಾತುಗಳನ್ನ ಫಾಲೋ ಮಾಡ್ತೀನಿ. ಅಪ್ಪ ಸಹ ಅಮ್ಮ ನಮ್ಮ ಒಳ್ಳೆಯದಕ್ಕೆ ಹೇಳುತ್ತಿರೋದು ಅಂತ ಅವರು ವಿರೋಧ ಮಾಡಲ್ಲ. ಹಾಗಾಗಿ ಅಮ್ಮ ಹಾಕಿದ ಗೆರೆ ದಾಟಲ್ಲ ಎಂದು ವೈಷ್ಣವಿ ಹೇಳಿದರು.

ಈ ವೇಳೆ ವೈಷ್ಣವಿ ತಾಯಿ ಮಾತನಾಡಿ, ಕೋಪದಲ್ಲಿ ಕೈಯಲ್ಲಿ ಏನು ಸಿಗುತ್ತೆ ಅದರಲ್ಲಿ ಹೊಡೆಯುತ್ತೇನೆ. ಮಕ್ಕಳ ಒಳ್ಳೆಯದಕ್ಕಾಗಿ ಹೊಡೆಯುತ್ತಿದ್ದೆ ಅಂತ ಅಂದ್ರು. ಮನೆಯಲ್ಲಿ ಪೊರಕೆ, ದೋಸೆ ಸ್ಟಿಕ್, ಕೋಲು ಹೀಗೆ ಎಲ್ಲ ಅಮ್ಮನ ಆಯುಧಗಳು. ಕೆಲವೊಮ್ಮೆ ಅಮ್ಮ ಹೊಡೆಯಲಿಲ್ಲ ಅಂದ್ರೆ ನಾನು ಸರಿ ಮಾಡ್ತೀದ್ದೀನಿ ಅಂತ ಅನ್ನಿಸುತ್ತಿತ್ತು. ಯಾವಗಲೂ ಪೊರಕೆಯಲ್ಲಿ ಹೊಡೆಯುತ್ತಿದ್ದರಿಂದ ನನಗೂ ರೂಢಿ ಆಗಿತ್ತು. ಒಂದು ತರ ಪೊರಕೆಯಲ್ಲಿ ಹೊಡೆಸಿಕೊಳ್ಳೋಕೆ ಬೇಜಾರು ಆಗ್ತಿರಲಿಲ್ಲ ಅಂತ ಹೇಳಿ ವೈಷ್ಣವಿ ನಕ್ಕರು.

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕರುನಾಡಿನ ಮನೆ ಮಾತಾಗಿರುವ ವೈಷ್ಣವಿ ತಮ್ಮದೇ ಅಭಿಮಾನಿಗಳನ್ನ ಹೊಂದಿದ್ದಾರೆ. ಈಗಾಗಲೇ ಫ್ಯಾನ್ಸ್ ವೈಷ್ಣವಿ ಪರ ಕ್ಯಾಂಪೇನ್ ಮಾಡಲು ಆರಂಭಿಸಿದ್ದಾರೆ. ಈ ಹಿಂದೆ ಅಗ್ನಿಸಾಕ್ಷಿ ಧಾರಾವಾಹಿ ಪ್ರಿಯಾಂಕ ಬಿಗ್‍ಬಾಸ್ ಮನೆ ಪ್ರವೇಶಿಸಿದ್ದರು.

Comments

Leave a Reply

Your email address will not be published. Required fields are marked *